ದೇವನಹಳ್ಳಿ: ಹಿಜಾಬ್ ವಿವಾದದ ಪ್ರಕರಣ ನ್ಯಾಯಾಲಯದಲ್ಲಿದೆ. ಮಾನ್ಯ ಹೈಕೋರ್ಟ್ ಮಧ್ಯಂತರ ಆದೇಶದಂತೆ ಯಾರು ಸಾಮರಸ್ಯ ಕದಡುವ ರೀತಿ ವರ್ತಿಸುವಂತಿಲ್ಲ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಲು ಸೂಚಿಸಿದ್ದರು. ಅದರಂತೆ ಸಮಾಜದ ಎಲ್ಲಾ ಮುಖಂಡರ ಜೊತೆ ಸಭೆ ನಡೆಸಲಾಗಿದೆ. ಹೈಕೋರ್ಟ್ ಆದೇಶದವರೆಗೂ ಯಾವುದೇ ಹಿಜಾಬ್-ಕೇಸರಿ ಶಾಲು ಧರಿಸಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಆವರಣಕ್ಕೆ ಬರುವಂತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಹಿಜಾಬ್ ವಿವಾದದ ನಡುವೆ ಶಾಲಾ ಕಾಲೇಜುಗಳು ತೆರೆದಿವೆ.ಬೂದಿಮುಚ್ಚಿದ ಕೆಂಡದಂತಿರುವ ವಿವಾದ ಮತ್ತೆ ಬುಗಿಲೇಳದಿರಲು ಜಿಲ್ಲಾಡಳಿತ ಕ್ರಮ ಜರುಗಿಸುವಂತೆ ಸರ್ಕಾರ ಆದೇಶಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಾಲೆಗಳು ಓಪನ್ ಆಗಿವೆ. ಇಂದು ಶಾಲೆಗಳು ತೆರದ ಹಿನ್ನೆಲೆ ವೀಕ್ಷಣೆಗಾಗಿ ಶಾಲೆಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಬಸ್ ಸ್ಟ್ಯಾಂಡ್ ಬಳಿಯ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಶಾಲೆಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಶಿಕ್ಷಕರ ಬಳಿ ಮಾಹಿತಿ ಪಡೆದರು.
Kshetra Samachara
14/02/2022 03:41 pm