ಬೆಂಗಳೂರು: ಹಿಜಾಬ್ ವರ್ಸಸ್ ಕೇಸರಿ ವಿವಾದ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಸರಕಾರ ರಜೆ ಘೋಷಿಸಿತ್ತು. ಇಂದು ರಾಜ್ಯದಲ್ಲಿ ಶಾಲಾ ಪುನರ್ ಆರಂಭಗೊಂಡಿದ್ದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇನ್ನೂ ನಗರದ ಚಂದ್ರಾಲೇಔಟ್ ನ ವಿದ್ಯಾಸಾಗರ್ ಶಾಲೆಯು ಇಂದಿನಿಂದ ಆರಂಭಗೊಂಡಿದ್ದು,ಎಲ್ಲಾ ಮಕ್ಕಳು ಬಂದಿದ್ದಾರೆ ಪೋಷಕರು ಕೋ ಅಪರೇಟ್ ಮಾಡುತ್ತಿದ್ದಾರೆ.
ಪೋಷಕರು ಯಾರು ಕೂಡ ಗಲಾಟೆ ಮಾಡಿಲ್ಲ. ಮಕ್ಕಳು ನಾವು ಹೇಳುವ ಮಾತನ್ನು ಕೇಳುತ್ತಿದ್ದಾರೆ ಎಂದು ಶಾಲಾ ಪ್ರಾಂಶುಪಾಲರಾದ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಮಕ್ಕಳೇ ಸ್ವಯಂ ಪ್ರೇರಿತವಾಗಿ ಹಿಜಾಬ್ ಅನ್ನು ವಿಶೇಷ ಕೊಠಡಿಯಲ್ಲಿ ತೆಗೆಯುತ್ತಾರೆ. ಈ ಹಿಂದೆ ಮಕ್ಕಳು ಬುರ್ಖಾ ಹಾಕಿಕೊಂಡೇ ಶಾಲೆಗೆ ಬರುತ್ತಿದ್ದರು, ವಿಶೇಷ ಕೊಠಡಿಯಲ್ಲಿ ಬುರ್ಖಾ , ಹಿಜಾಬ್ ಸ್ಕಾರ್ಫ್ ತೆಗೆಯುತ್ತಿದ್ದರು ಶಾಲೆ ಬಿಡುವಾಗ ಮತ್ತೇ ಧರಿಸಿ ಹೋಗುತ್ತಿದ್ರು ಈಗ ಕೂಡ ಅದೇ ಪಾಲನೆ ಆಗುತ್ತಿದೆ ಎಂದರು.
ಇನ್ನೂ ಶಾಲೆಗೆ ಭೇಟಿ ಮಾಡಿ ಮಾತನಾಡಿದ ಎಸಿ ಶಿವಣ್ಣ, ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ ಹೇಳಿರುವಂತೆ ನಗರದ ಶಾಲೆಗಳಿಗೆ ವಿಸೀಟ್ ಮಾಡಿದ್ದೇನೆ.ಇಲ್ಲಿ ಎಲ್ಲಾ ಸರಿಯಾಗಿದೆ, ಯಾವುದೇ ತೊಂದರೆ ಇಲ್ಲ.ಇನ್ನೂ ಈ ಶಾಲೆಯ ಗಲಾಟೆ ಬಗ್ಗೆ ಯಾವುದೇ ವಿಷಯ ಚರ್ಚೆ ಆಗಿಲ್ಲ, ಡಿಸಿ ಆದೇಶದಂತೆ ನಗರದ ಶಾಲೆಗಳನ್ನ ಪರಿಶೀಲನೆ ಮಾಡ್ತೀನಿ ಎಂದಿದ್ದಾರೆ.
Kshetra Samachara
14/02/2022 01:30 pm