ಅನೇಕಲ್: ಮಕ್ಕಳನ್ನು ದುಡಿಸಿಕೊಂಡರೆ ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಆನೇಕಲ್ ತಾಲ್ಲೂಕಿನ ಗೌರವಾನ್ವಿತ 2 ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಲ್ಮಾ ಎ.ಎಸ್ ರವರು ಅಭಿಪ್ರಾಯ ಪಟ್ಟರು.
ಆನೇಕಲ್ ತಾಲ್ಲೂಕಿನ ಸರ್ಕಾರಿ ಹೆಣ್ಣು ಮಕ್ಕಳ ಫ್ರೌಡಶಾಲೆ ಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ನಡೆದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು ಅವರು ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆ ಬಹಳ ಮುಖ್ಯ, ಭಾರತ ಅಂದರೆ ಯುವಜನ, ಮುಂದಿನ ಭವಿಷ್ಯ ಹೇಗಿರುತ್ತದೆ ಎಂದು ಈಗಿನ ವಿದ್ಯಾರ್ಥಿಗಳು ತೀರ್ಮಾನಿಸುತ್ತಾರೆ ಶೇ,50 ರಷ್ಟು ಯುವ ಜನತೆ ಇರೋದ್ರಿಂದ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ಹೇಳಿದರು,
ಸರ್ಕಾರಿ ವಕೀಲರಾದ ಆರ್ ಚಂದ್ರಶೇಖರ್ ಮಾತನಾಡಿ ಚಿಕ್ಕ ಮಕ್ಕಳು ಸ್ಲೇಟು, ಪೆನ್ನು ಹಿಡಿಯಬೇಕೆ ಹೊರೆತು ಇಟ್ಟಿಗೆ ಸಿಮೆಂಟ್ ನ್ನು ಅಲ್ಲ, ನಾವು ಇಂತಹ ಸೋಚನೀಯ ಸಮಾಜದಲ್ಲಿ ಇವತ್ತು ನಾವು ಬದುಕುತ್ತಿದ್ದೇವೆ, ಮಕ್ಕಳು ಲಾಲನೆ ಪಾಲನೆ ಓದಯವ ಸಮಯದಲ್ಲಿ ಬಾಲ ಕಾರ್ಮಿಕರನ್ನಾಗಿ ಮಾಡುವುದು ಬಹಳ ಬೇಸರದ ವಿಷಯ ಎಂದರು,ಸಂವಿಧಾನ ನಮಗೆ ಮಕ್ಕಳ ಹಕ್ಕುಗಳನ್ನು ನೀಡಿದೆ ಶಿಕ್ಷಣದ ಹಕ್ಕು ಬಹಳ ಮುಖ್ಯ, ಪೋಷಕರಿಗೆ ಇಂತಹ ಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳಿದರು,
ವಕೀಲರ ಸಂಘದ ಅಧ್ಯಕ್ಷರಾದ ವೈ ಪ್ರಕಾಶ್ ರವರು ಮಾತನಾಡಿ, ಸರ್ಕಾರಿ ಶಾಲೆಯ ಮಕ್ಕಳ ನಡವಳಿಕೆ ಉತ್ತಮವಾಗಿರುತ್ತದೆ, ಉತ್ತಮ ಜೊತೆಯಲ್ಲಿ ಒಳ್ಳೆಯ ನಡವಳಿಕೆ ಕಲಿಸಲಾಗುತ್ತದೆ ಎಂದರು, ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಪ್ರೌಡ ಶಾಲೆಯ ಮುಖ್ಯೋಪಾಧ್ಯಾಯರಾದ ಸರೋಜನಾಯ್ಕ್, ಶಿಕ್ಷಕರಾದ ರಂಗ್ರೇಜಿ, ಅಶೋಕ್, ಮುನಿರತ್ನಮ್ಮ, ಗಿರೊಹಮ್ಮ ಗೋಪಾಲಕೃಷ್ಣ ಟಿ, ಮತ್ತು ಆನೇಕಲ್ ಕಾನೂನು ಸೇವಾ ಪ್ರಾಧಿಕಾರದ ವಕೀಲರಾದ ಶಿವರಾಜು, ಜೆಎಂಕೆ ಮೋಹನ್ ಭಾಗ್ಯ, ಸುಶೀಲ ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು.
Kshetra Samachara
14/06/2022 03:42 pm