ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ.!

ಬೆಂಗಳೂರು: ಒಂದಲ್ಲ ಎರಡಲ್ಲ ಒಟ್ಟು ನಾಲ್ಕು ವಾಹನಗಳು ಸರಣಿ ಅಪಘಾತಕ್ಕೆ ಈಡಾಗಿವೆ. ಕಾರ್ ಗ್ಲಾಸ್ ಪೀಸ್ ಪೀಸ್ ಆಗಿದ್ದರೆ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ. ಇನ್ನು ಮಧ್ಯದಲ್ಲಿ ಸಿಲುಕಿದ್ದ ಟಿಟಿ ವಾಹನವಂತೂ ಅಪ್ಪಚ್ಚಿ ಆಗಿದೆ. ಅಪಘಾತದ ದೃಶ್ಯ ನೋಡಿದರೆ ಮೈ ಝುಮ್ ಅನಿಸತ್ತದೆ.

ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಲಾರಿ ಬ್ರೇಕ್ ಫೇಲ್ ಆಗಿ ಸರಣಿ ಅಪಘಾತ ನಡೆದಿದೆ. ಹೊಸೂರು ಕಡೆಯಿಂದ ಬೆಂಗಳೂರಿನ ಕಡೆ ಬರುತ್ತಿದ್ದ ಲಾರಿ ಗಾರೆ ಪಾಳ್ಯ ಸಿಗ್ನಲ್ ಬಳಿ ಬರುತ್ತಿದ್ದಂತೆ ಬ್ರೇಕ್ ಫೇಲ್ಯೂರ್ ಆಗಿ ಸಿಗ್ನಲ್ ಬಳಿ ನಿಂತಿದ್ದ ಟಿಟಿ ವಾಹುನ, ಎರಡು ಕಾರು ಮತ್ತು ಇನ್ನೊಂದು ಲಾರಿಗೆ ಗುದ್ದಿದೆ. ಎರಡು ಲಾರಿಗಳ ಮಧ್ಯೆ ಸಿಲುಕಿದ ಟಿಟಿ ವಾಹನ ಅಪ್ಪಚ್ಚಿ ಆಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಟಿಟಿ ಚಾಲಕ ಅಪಘಾತ ಸಂಭವಿಸುತ್ತಿದ್ದಂತೆ ವಾಹನದಿಂದ ರಸ್ತೆ ಮೇಲೆ ಜಿಗಿದಿದ್ದರಿಂದ ಸಣ್ಣಪುಟ್ಟ ಗಾಯಗಳಿಂದ ಬಚಾವಾಗಿದ್ದಾನೆ.

ಅಪಘಾತ ಆಗುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಂದ ಹುಳಿಮಾವು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

07/07/2022 09:15 am

Cinque Terre

44.54 K

Cinque Terre

1

ಸಂಬಂಧಿತ ಸುದ್ದಿ