ದೇವನಹಳ್ಳಿ: ಇಂದು ಕೂಡ ಯುದ್ಧಗ್ರಸ್ತ ಯುಕ್ರೇನಿನಿಂದ ರಾಜ್ಯಕ್ಕೆ 13ನೇ ತಂಡದಲ್ಲಿ 27 ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸಿದರು.
ಇಂದು ಸಂಜೆ 6.30ರ ವಿಮಾನದಲ್ಲಿ ವಿದ್ಯಾರ್ಥಿಗಳು ದೇವನಹಳ್ಳಿ ತಲುಪಿದ್ದು, ಪೋಷಕರು ಬರಮಾಡಿಕೊಂಡರು.
ವಿದ್ಯಾರ್ಥಿಗಳು ದೇವನಹಳ್ಳಿ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ಸ್ವೀಟ್ ತಿನ್ನಿಸಿ ಸಂಭ್ರಮಿಸಿದರು.
ಬೆಳಗ್ಗೆ ದೆಹಲಿಗೆ ಬಂದಿಳಿದ ತಂಡ ಇದೀಗ ಕರುನಾಡು ತಲುಪಿದೆ.
ಇದೇ ವೇಳೆ ಪೋಷಕರ ಜೊತೆ ರಾಜ್ಯದ ನೋಡಲ್ ಅಧಿಕಾರಿ ಮನೋಜ್
ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ಈ ಸಂದರ್ಭ ಮಾತನಾಡಿದ ನೋಡಲ್ ಅಧಿಕಾರಿ ತಮ್ಮ ಸಂತೋಷ ಹಂಚಿಕೊಂಡರು.
Kshetra Samachara
04/03/2022 07:59 am