ದೇವನಹಳ್ಳಿ:ಉಕ್ರೇನ್ ದೇಶದಲ್ಲಿದ್ದ ಕನ್ನಡದ 37 ವಿದ್ಯಾರ್ಥಿಗಳು ಮರಳಿ ತಾಯ್ನಾಡಿಗೆ ಬಂದಿದ್ದಾರೆ. ಉಕ್ರೇನ್‌ನಿಂದ ದೆಹಲಿಗೆ ಬಂದು ಅಲ್ಲಿಂದ ದೇವನಹಳ್ಳಿ ಕೆಂಪೆಗೌಡ ನಿಲ್ದಾಣಕ್ಕೆ ಬಂದಿಳಿದಾಗ ಅಲ್ಲಿ ನಿಜಕ್ಕೂ ಭಾವ ಕ್ಷಣವೇ ನಿರ್ಮಾಣ ಆಗಿತ್ತು. ಹಿರಿಯೂರು ಮೂಲದ ವಿದ್ಯಾರ್ಥಿಯ ಅಮ್ಮ ಮಗನ ಕಂಡು ಕಣ್ಣೀರಾದರು. ತಬ್ಬಿ ಮುದ್ದಾಡಿದರು. ನಿಜಕ್ಕೂ ಈ ಕ್ಷಣ ಎಲ್ಲರ ಕಂಗಳನ್ನ ತೇವಗೊಳಿಸಿತ್ತು.
ಉಕ್ರೇನ್ ನಿಂದ ವಿದ್ಯಾರ್ಥಿಗಳ ಆಗಮನ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ಏರ್ಪೋಟ್ ಗೆ ಪೋಷಕರು ಆಗಮಿಸಿದ್ದರು. ನಿನ್ನೆ ಬರಬೇಕಿದ್ದ ವಿದ್ಯಾರ್ಥಿಗಳು ಕಾರಣಂತರಗಳಿಂದ ಇಂದು ಆಗಮಿಸಿದ ಹಿನ್ನೆಲೆಯಲ್ಲಿ ಪೋಷಕರು ಸ್ವಲ್ಪ ಟೆನ್ಶನ್ ಗೆ ಒಳಗಾಗಿದ್ದರು. ಇಂದು ಬೆಳಗ್ಗೆ 7:15 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 37 ಜನ ವಿದ್ಯಾರ್ಥಿಗಳು ತಮ್ಮ ಮನೆಗಳತ್ತ ತೆರಳಿದರು.
Kshetra Samachara
07/03/2022 11:45 am