ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿರಂತರ ಮಳೆ ಅವಾಂತರ; ಕೆರೆಕಟ್ಟೆ ಸೋರಿಕೆ! ಅಪಾಯ ಛಾಯೆ

ಆನೇಕಲ್: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೆರೆ ಶಿಥಿಲಾವಸ್ಥೆಗೆ ತಲುಪಿ ಕೆರೆ ಅಂಚಿನಲ್ಲಿ ಸೋರಿಕೆ (ಲಿಕೇಜ್ ) ಆಗುತ್ತಿರುವುದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಕರ್ಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಾಳ್ದೇನ್ಹಳ್ಳಿ ಕೆರೆ ಬಳಿ ಕಂಡುಬಂದಿದೆ.

ಇನ್ನು, ಇಲ್ಲಿನ ಕೆರೆಕಟ್ಟೆ ಒಡೆದು ಸಣ್ಣಮಟ್ಟದಲ್ಲಿ ನೀರು ಪೋಲಾಗ್ತಿದೆ. ಕಳೆದ ಬಾರಿ ಸಹ ಇದೇ ಜಾಗದಲ್ಲಿ ಕೆರೆ ಕಟ್ಟೆ ಒಡೆದ ಬಳಿಕ ತಾತ್ಕಾಲಿಕವಾಗಿ ಮುಚ್ಚಲಾಗಿತ್ತು. ಒಂದು ವೇಳೆ ಈ ಬಾರಿ ಏನಾದರೂ ಕೆರೆಕಟ್ಟೆ ಸಂಪೂರ್ಣ ಒಡೆದರೆ ರೈತರ ಬೆಳೆ ಮತ್ತು ಪಕ್ಕದಲ್ಲೇ ಇರುವ ಆನೇಕಲ್ ರೈಲ್ವೆ ಸ್ಟೇಷನ್ ಗೆ ನೀರು ನುಗ್ಗಿ ಸಾಕಷ್ಟು ಸಾವು- ನೋವು ಸಂಭವಿಸುವ ಸಾಧ್ಯತೆ ಇದೆ.

ಘಟನಾ ಸ್ಥಳಕ್ಕೆ ಕರ್ಪೂರ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸ್ಥಳೀಯ ಜನಪ್ರತಿನಿಧಿ ತಿಮ್ಮೇಗೌಡರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ತಿಮ್ಮೇಗೌಡ ಮಾತನಾಡಿ, ಕೆರೆ ಕಟ್ಟೆ ಒಡೆಯಲು ಕಾರಣ ಈ ಹಿಂದೆ ಇದ್ದ ಸದಸ್ಯರು ಅಕ್ರಮವಾಗಿ ಮರಳು ತೆಗೆದಿರುವುದು ಕಾರಣವೆಂದು ನೇರ ಆರೋಪ ಮಾಡಿದರು.

ಕಳೆದ ವರ್ಷ ದಂಡಾಧಿಕಾರಿ ದಿನೇಶ್ ಕುಮಾರ್ ಮತ್ತು ಸಿಇಒ ಸಂಗಪ್ಪನವರ ಗಮನಕ್ಕೂ ತರಲಾಗಿತ್ತು. ಆದರೂ ಸಹ ಈ ಬಗ್ಗೆ ಗಮನ ಹರಿಸಿಲ್ಲ ಅಂತ ಚುನಾಯಿತ ಪ್ರತಿನಿಧಿ ಆರೋಪ ಮಾಡಿದ್ರು. ಪಿಡಿಒ ಬಸವರಾಜು ಮಾತನಾಡಿ, ನನಗೆ ಮಾಹಿತಿ ಬಂದ ಕೂಡಲೇ ಸ್ಥಳ ಪರಿಶೀಲನೆ ಮಾಡಿದ್ದೇನೆ. ಮೇಲಾಧಿಕಾರಿಗಳ ಗಮನಕ್ಕೂ ಈ ವಿಚಾರ ತರ್ತೇನೆ ಎಂದರು.

Edited By : Shivu K
PublicNext

PublicNext

01/09/2022 08:21 am

Cinque Terre

34.57 K

Cinque Terre

1

ಸಂಬಂಧಿತ ಸುದ್ದಿ