ಬೆಂಗಳೂರು: ಕಳೆದ 15 ದಿನಗಳ ಹಿಂದೆ ವಿಜಯನಗರದ ಮಾರ್ಕೆಟ್ ರಸ್ತೆಯ ಅವ್ಯವಸ್ಥೆ ಬಗ್ಗೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ಹಾಳಾಗಿದ್ದ ರಸ್ತೆಯಲ್ಲಿ ಜನರ ಪರಿಸ್ಥಿತಿ ನೋಡಿ, ಫುಟ್ ಪಾತ್ ವ್ಯಾಪಾರಿಗಳ ಪಾಡು ಕೇಳಿ ಅಧಿಕಾರಿಗಳವರೆಗೂ ಈ ಸುದ್ದಿಯನ್ನ ಮುಟ್ಟಿಸಿದ್ವಿ.
ಹೀಗೆ ನಮ್ಮ ವರದಿಯಿಂದ ಎಚ್ಚೆತ್ತ BWSSB ಅಧಿಕಾರಿಗಳು ವರದಿಯ ನಂತರ ಎಚ್ಚೆತ್ತುಕೊಂಡು ರಸ್ತೆಯಲ್ಲಿರುವ ಅಷ್ಟೂ ಗುಂಡಿಗಳನ್ನ ಮುಚ್ಚಿಸಿದ್ದಾರೆ. ಇದ್ರಿಂದ ರಸ್ತೆ ಬದಿಯ ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ತುಂಬಾನೆ ಅನುಕೂಲವಾದಂತಾಗಿದೆ. ಅಲ್ಲದೇ ಇವರು ಪಬ್ಲಿಕ್ ನೆಕ್ಸ್ಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಮ್ಮ ರಿಪೋರ್ಟರ್ ನಡೆಸಿರುವ ವಾಕ್ ಥ್ರೂ ಇದೆ ನೋಡೋಣ ಬನ್ನಿ..
Kshetra Samachara
29/07/2022 06:39 pm