ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಗಸ್ಟ್ 5 ರ ಫಲಪುಷ್ಪ ಪ್ರದರ್ಶನ : ತೋಟಗಾರಿಕೆ ಇಲಾಖೆ ಸಿದ್ಧತೆ

ಬೆಂಗಳೂರು : ಆಗಸ್ಟ್ 5ರಿಂದ 15 ನೇ ತಾರೀಖಿನವರೆಗೂ ಲಾಲ್ ಬಾಗ್ ಸಸ್ಯ ತೋಟದಲ್ಲಿ ಡಾ.ರಾಜ್ ಕುಮಾರ್ ಮತ್ತು ಡಾ. ಪುನೀತ್ ರಾಜಕುಮಾರ್ ರವರ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಈ ಫಲಪುಷ್ಪ ಪ್ರದರ್ಶನದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಸೂಕ್ತ ಮುಂಜಾಗ್ರತಾ ಕಾರ್ಯಗಳಿಗೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ವಿಭಾಗದ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ, ಎಸಿಪಿ, ಇನ್ಸ್ ಪೆಕ್ಟರ್ ಸೇರಿದಂತೆ ಇನ್ನಿತರರನ್ನ ಒಳಗೊಂಡ ಹಿರಿಯ ಅಧಿಕಾರಿಗಳು ಲಾಲ್ ಬಾಗ್ ನ ಪರಮ ವೀಕ್ಷಣೆ ನಡೆಸಿದರು.

ತೋಟಗಾರಿಕಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಭೆ ಕೂಡ ನಡೆಸಲಾಗಿದ್ದು,ಈ ಸಂದರ್ಭದಲ್ಲಿ ತೋಟಗಾರಿಕಾ ಜಂಟಿ ನಿರ್ದೇಶಕ ಡಾ. ಎಂ ಜಗದೀಶ್, ತೋಟಗಾರಿಕಾ ಉಪನಿರ್ದೇಶಕಿ ಶ್ರೀಮತಿ ಕುಸುಮ ಹಾಗೂ ಮೈಸೂರು ಉದ್ಯಾನ ಕಲಾ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.

Edited By : Nirmala Aralikatti
Kshetra Samachara

Kshetra Samachara

23/07/2022 12:23 pm

Cinque Terre

884

Cinque Terre

0

ಸಂಬಂಧಿತ ಸುದ್ದಿ