ಬೆಂಗಳೂರು:ಜಿಎಸ್‌ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ವಿಧಿಸಿರುವ ಶೇ.5ರಷ್ಟು ಜಿಎಸ್‌ಟಿ ವಿರೋಧಿಸಿ ಇಂದು ಸಿಲಿಕಾನ್ ಸಿಟಿಯಲ್ಲಿ ಪ್ರೊಟೆಸ್ಟ್ ನಡೆದವು. ನಗರದ ಪ್ರಮುಖ ವ್ಯಾಪಾರಿ ಸಂಘಟನೆಯಾದ ನ್ಯೂ ತರಗುಪೇಟೆ ಮರ್ಚೆಂಟ್ ಅಸೋಸಿಯೇಷನ್ ಚಾಮರಾಜಪೇಟೆಯಲ್ಲಿ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಿತು.
ಆಹಾರ ಧಾನ್ಯಗಳ ಮಾರಾಟ ವಹಿವಾಟು ಇಂದು ನಿಲ್ಲಿಸಿದ್ದೇವೆ. ಜಿಎಸ್‌ಟಿ ಜಾರಿ ಮಾಡಿದ್ದೇ ಆದರೆ ಗ್ರಾಹಕರು ಹಾಗೂ ನಮಗೆ ತುಂಬಾ ತೊಂದರೆ ಆಗಲಿದೆ ಎಂದು ಪ್ರತಿಭಟನಾಕಾರರು ಕಳವಳ ವ್ಯಕ್ತಪಡಿಸಿದರು.
ಜೂನ್ 28 ಮತ್ತು 29 ರಂದು ಜಿಎಸ್‌ಟಿ ಮಂಡಳಿಯು ಆಹಾರ ಧಾನ್ಯಗಳ ಮೇಲೆ ಶೇ. 5ರಷ್ಟು ತೆರಿಗೆ ವಿಧಿಸಿ ಆದೇಶ ಹೊರಡಿಸಿದ್ದರು. ಈ ಆದೇಶ ದೇಶದಾತ್ಯಂತ ಜುಲೈ 18 ರಿಂದ ಜಾರಿಗೆ ಬರಲಿದೆ. ಆಹಾರ ಧಾನ್ಯಗಳಾದ ಅಕ್ಕಿ, ಜೋಳ, ರಾಗಿ ಇತರೆ ಅಗತ್ಯ ವಸ್ತುಗಳನ್ನು ಕಾರ್ಮಿಕರು, ಬಡವರು, ಮಧ್ಯಮ ವರ್ಗದವರಿಗೆ ದಿನನಿತ್ಯ ಬಳಸುವ ಅವಶ್ಯಕ ಪದಾರ್ಥಗಳ ಮೇಲೆ ತೆರಿಗೆ ಹೆಚ್ಚಾಗಲಿದೆ ಎಂದು ಆತಂಕ ಹೊರ ಹಾಕಿದರು.
PublicNext
15/07/2022 01:13 pm