ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅನಧಿಕೃತವಾಗಿ ಮನೆ ನಿರ್ಮಾಣ : ತೆರವು ಮಾಡುವಂತೆ ಒತ್ತಾಯಿಸಿ ತಾಲೂಕು ಕಾರ್ಯಾಲಯ ಕಚೇರಿಗೆ ಮುತ್ತಿಗೆ

ಅನೇಕಲ್: ಬಡವರಿಗೆ ನಿರ್ಗತಿಕರಿಗೆ ಕಾಯ್ದಿರಿಸಿದ್ದ ಜಾಗದಲ್ಲಿ ಬಲಾಢ್ಯರು ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಸದ್ಯ ಈ ಜಾಗವನ್ನು ತೆರವು ಮಾಡುವಂತೆ ಒತ್ತಾಯಿಸಿ ಇಂದು ತಾಲೂಕು ಪಂಚಾಯಿತಿ ಕಾರ್ಯಾಲಯಕ್ಕೆ ಸರ್ಜಾಪುರ ಗ್ರಾಮಸ್ಥರು ಮುತ್ತಿಗೆ ಹಾಕಿದ್ದಾರೆ.

ಸರ್ಜಾಪುರದ ಸರ್ವೇ ನಂಬರ್ 432 ಮತ್ತು 435 ಹಾಗೂ 438 ರಲ್ಲಿ ನಿರ್ಮಿಸುತ್ತಿರುವ ಅನಧಿಕೃತ ಮನೆ ಗಳನ್ನು ತೆರವುಗೊಳಿಸಿ ಹಕ್ಕುಪತ್ರ ಕೊಟ್ಟಿರುವಂತಹ ಫಲಾನುಭವಿಗಳಿಗೆ ಜಾಗ ನೀಡಿ ಎಂದು ಮನವಿ ಮಾಡಿಕೊಂಡರು .

ಇನ್ನು ಈ ಜಾಗದಲ್ಲಿ ಸುಮಾರು 13 ವರ್ಷಗಳ ಹಿಂದೆ ಸರ್ಕಾರಿ ಆಶ್ರಯ ಯೋಜನೆ ಅಡಿ 58 ಮನೆಗಳನ್ನು ಕಟ್ಟಿಕೊಂಡಿದ್ದರು. ಎಂಟು ಗುಂಟೆ ಜಾಗ ಪಂಚಾಯತಿ ಕಾರ್ಯಾಲಯಕ್ಕೆ ಬಿಡಲಾಗಿತ್ತು ಅದರೆ .ಆ ಎಂಟು ಗುಂಟೆ ಜಾಗದಲ್ಲಿ ಅನಧಿಕೃತವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ ಹಾಗಾಗಿ ಜಾಗವನ್ನು ತೆರವು ಮಾಡುವಂತೆ ಒತ್ತಾಯಿಸಿ ತಾಲೂಕು ದಂಡಾಧಿಕಾರಿಗಳಿಗೆ ಪಿಡಿಓ ಧಿಕಾರಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಗಮನಕ್ಕೆ ತಂದಿದ್ದರಂತೆ . ಇನ್ನು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿರುವ ಬಲಾಡ್ಯ ಮನೆಗಳನ್ನು ತೆರವುಗೊಳಿಸುವಂತೆ ಪಟ್ಟುಹಿಡಿದಿದ್ದಾರೆ.

ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇನ್ನು ಈ ಜಾಗದ ಬಗ್ಗೆ ಕ್ರಮಕೈಗೊಳ್ಳುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣಸ್ವಾಮಿ ಗೆ ಮನವಿ ಪತ್ರವನ್ನು ಸಲ್ಲಿಸಿದರು.

ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Manjunath H D
Kshetra Samachara

Kshetra Samachara

04/07/2022 09:08 pm

Cinque Terre

2.48 K

Cinque Terre

0

ಸಂಬಂಧಿತ ಸುದ್ದಿ