ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಮ್ಮ ಮೆಟ್ರೋ ಫೇಸ್ -3 ಕಾಮಗಾರಿ ಮಾರ್ಗದಲ್ಲೇ ಬಿಬಿಎಂಪಿ ಪ್ಲೈ ಓವರ್ ನಿರ್ಮಾಣ

ಎಕ್ಸ್ ಕ್ಲೂಸಿವ್ - ಗಣೇಶ್ ಹೆಗಡೆ

ಬೆಂಗಳೂರು: ನಮ್ಮ ಮೆಟ್ರೋದ ಮೂರನೇ ಹಂತದ ಪ್ರಸ್ತಾವಿತ ಮೂರನೇ ಹಂತದ ಯೋಜನೆ ಮಾರ್ಗದಲ್ಲಿಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎರಡು ಮೇಲು ಸೇತುವೆ ಯೋಜನೆ ಬರ್ತಿರೋದು ಎರಡು ಸಂಸ್ಥೆಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಮೂರನೇ ಹಂತದಲ್ಲಿ 44.65 ಕಿ.ಮೀ ಉದ್ದದ ಒಟ್ಟು ಎರಡು ಕಾರಿಡಾರ್ ಬರುತ್ತಿದೆ. ಹೊಸಹಳ್ಳಿಯಿಂದ ಕಡಬಗೆರೆ ವರೆಗಿನ 12.5 ಕಿ.ಮೀ ಮೆಟ್ರೋ ಮಾರ್ಗ ಹಾಗೂ ಜೆ.ಪಿ.ನಗರದಿಂದ ಕೆಂಪಾಪುರವರೆಗಿನ 32.15 ಕಿ.ಮೀ ಮಾರ್ಗ ಬರಲಿದೆ.

ಜೆ.ಪಿ.ನಗರದ 4 ನೇ ಹಂತದಲ್ಲಿನ ಮೆಟ್ರೋ ರೈಲು ಮಾರ್ಗವೂ ಪಾಲಿಕೆಯ ಹೊರ ವರ್ತುಲ ರಸ್ತೆಯಲ್ಲೇ ಸಾಗುವುದರಿಂದ ಅದೇ ಮಾರ್ಗದಲ್ಲಿಯೇ ಬಿಬಿಎಂಪಿ ನಿರ್ಮಿಸಲು ಮುಂದಾಗಿರುವ ಸಾರಕ್ಕಿ ಜಂಕ್ಷನ್ ಹಾಗೂ ಇಟ್ಟಮುಡು ಜಂಕ್ಷನ್ ಬಳಿಯ ಎರಡು ಮೇಲು ಸೇತುವೆಗಳು ಮೆಟ್ರೋ ರೈಲು ಮಾರ್ಗ ಹಾಗೂ ಪಾಲಿಕೆ ಪ್ಲೈ ಓವರ್ ಕಾಮಗಾರಿಗೆ ಪರಸ್ಪರ ತೊಡಗಾಲಿದೆ.

ಈ ಹಿನ್ನೆಲೆಯಲ್ಲಿ ಕಳೆದ ಸೋಮ ವಾರ ನಡೆದ ಜುನ್ ,-27 ರಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆದಿದೆ. ಸದ್ಯ ಯಾವುದೇ ಕಾಮಗಾರಿ ಕೈಗೊಳ್ಳದಿರಲು ಎರಡು ಇಲಾಖೆ ಮುಖ್ಯಸ್ಥರು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

Edited By : Nirmala Aralikatti
Kshetra Samachara

Kshetra Samachara

04/07/2022 08:27 pm

Cinque Terre

826

Cinque Terre

0

ಸಂಬಂಧಿತ ಸುದ್ದಿ