ಬೆಂಗಳೂರು: ಈ ರಸ್ತೆಯನ್ನೊಮ್ಮೆ ನೋಡಿ... ವಾಹನ ಸವಾರರು ದಿನನಿತ್ಯ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ಅದರಲ್ಲೂ ಮಳೆ ಬಂದರೆ ಸಾಕು, ಈ ರಸ್ತೆ ಸಂಪೂರ್ಣ ಕೆಸರುಮಯ. ಈ ಹದಗೆಟ್ಟ ರಸ್ತೆಗಳಿಂದಾಗಿ ಲೇಔಟ್ ಜನರಂತೂ ತತ್ತರಿಸಿಯೇ ಹೋಗಿದ್ದಾರೆ.
ಇದು ಬೊಮ್ಮನಹಳ್ಳಿಯ vjp ಲೇಔಟ್. ಎರಡು ವರ್ಷಗಳಿಂದಲೂ ದುಸ್ಥಿತಿಯಲ್ಲಿಯೇ ಇದೆ. ಲೇಔಟ್ ನಿವಾಸಿಗಳು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಇದ್ದಾರೆ. ಮೊದಲು ಚೆನ್ನಾಗಿಯೇ ಇದ್ದ ರಸ್ತೆಯನ್ನು ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಬಂದು ಅಗೆದು ಹಾಳು ಮಾಡಿದ್ದಾರೆ. ಅಂದಿನಿಂದಲೂ ಯಾವುದೇ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲಿ ಈ ಲೇಔಟ್ ಜನರ ಸಂಕಷ್ಟ-ದುಮ್ಮಾನ ಆಲಿಸಲು ಮುಂದಾಗಿಲ್ಲ.
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
Kshetra Samachara
27/05/2022 10:49 pm