ಬೆಂಗಳೂರು: ದೇವರಚಿಕ್ಕನಹಳ್ಳಿ ಬಿಡಿಎ ಲೇಔಟ್ ನ ಜನರಿಗೆ ರಸ್ತೆಯ ಮೇಲೆ ಓಡಾಡುವುದಕ್ಕೆ ಭಾರೀ ಕಷ್ಟವಾಗಿದೆ. ಯಾಕಂದ್ರೆ ಇಲ್ಲಿ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಕಾಮಗಾರಿ ಮುಗಿಸಿ ಒಂದೂವರೆ ತಿಂಗಳಾದರೂ ಕೂಡ ರಸ್ತೆಯನ್ನು ಸರಿಪಡಿಸಿಲ್ಲ.
ಇದರಿಂದ ನಿವಾಸಿಗಳಿಗೆ ತೊಂದರೆ ಆಗಿದ್ದು ಮತ್ತು ತಮ್ಮ ವಾಹನಗಳನ್ನು ಈ ರಸ್ತೆಯ ಮೇಲೆ ತರಲು ಆಗ್ತಿಲ್ಲ. ಮಳೆ ಬಂದರೆ ಸಾಕು ರಸ್ತೆಗಳು ಕೆಸರುಮಯವಾಗಿರುತ್ತದೆ.
ಲೇಔಟ್ನ ನಿವಾಸಿಗಳು ತಮ್ಮ ಮನೆಗಳಿಗೆ ಹೋಗಲು ಒಂದು ಕಿಲೋಮೀಟರ್ ಬಳಸಿ ಬರುವಂತಾಗಿದೆ. ಕೂಡಲೇ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಈ ರಸ್ತೆಯನ್ನು ಸರಿಪಡಿಸಿ ನಿವಾಸಿಗಳಿಗೆ ಮುಕ್ತಿ ನೀಡಬೇಕು ಅನ್ನೋದು ಇಲ್ಲಿನ ಜನರ ಆಗ್ರಹವಾಗಿದೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
29/04/2022 05:47 pm