ಬೆಂಗಳೂರು: ಬಿಬಿಎಂಪಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿಲ್ಕ್ ಬೋರ್ಡ್ ನಿಂದ ಕೆಆರ್ ಪುರಂ ವರೆಗೂ ಔಟರ್ ರಿಂಗ್ ರೋಡ್ ನಲ್ಲಿ ಬಸ್ ಲೈನ್ ಮಾಡಿದೆ. 20000 ಫೈಬರ್ ರಿಫ್ಲೆಕ್ಟರ್ ಗಳನ್ನು ಹಾಕಲಾಗಿದೆ.
ಆದರೆ ಹೀಗೆ ರಸ್ತೆಯ ಬದಿಯಲ್ಲಿ ಅನಾಥವಾಗಿ ಬಿದ್ದಿದೆ ಫೈಬರ್ ರಿಫ್ಲೆಕ್ಟರ್ ಗಳು.
ಹೌದು ಬಿಬಿಎಂಪಿ ಕೋಟ್ಯಾಂತರ ರೂಪಾಯಿ ಖರ್ಚುಮಾಡಿ ಬಿಎಂಟಿಸಿ ಬಸ್ಸುಗಳಿಗೆ ಅಂತ ಒಂದು ಬಸ್ ಲೈನ್ ಔಟರ್ ರಿಂಗ್ ರೋಡ್ ನಲ್ಲಿ ಮಾಡಿತ್ತು. ಈ ರಸ್ತೆಯಲ್ಲಿ ಹಲವಾರು ಐಟಿ ಕಂಪನಿಗಳು ಎದ್ದು ಐಟಿ ಕಂಪನಿಗಳಿಗೆ ಹೋಗುವಂತಹ ಪ್ರಯಾಣಿಕರು ವೇಗವಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಮತ್ತು ಈ ರಸ್ತೆಯ ಮೇಲೆ ವಾಹನ ಸಂಚಾರ ಕಮ್ಮಿ ಮಾಡಲು ಈ ಐಡಿಯಾವನ್ನು ಬಿಬಿಎಂಪಿ ಮತ್ತು ಬಿಎಂಟಿಸಿ ಮಾಡಿತ್ತು.
ಈಗ ಬಸ್ ಲೈನ್ ನ ಫೈಬರ್ ರಿಫ್ಲೆಕ್ಟರ್ ಗಳು ರಸ್ತೆಯ ಮೇಲೆ ಎಲ್ಲೆಂದರಲ್ಲಿ ಬಿದ್ದಿದೆ. ಎಲ್ಲಾ ರಿಫ್ಲೆಕ್ಟರ್ ಗಳು ಮುರಿದು ಹೋಗಿವೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
29/04/2022 03:15 pm