ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೈಸ್ ರೋಡ್ ನಲ್ಲಿ ಆಕ್ಸಿಡೆಂಟ್ ಗಳ ಸುರಿಮಳೆ..

ಬೆಂಗಳೂರು: ನೈಸ್ ರೋಡ್ ನ ಡೆಡ್ ಎಂಡ್ ರಸ್ತೆಯಲ್ಲಿ‌ ವಾರಕ್ಕೊಂದು ಆಕ್ಸಿಡೆಂಟ್ ಗಳು ಆಗ್ತಾನೆ ಇರುತ್ತೆ.. ಈ ಹಿಂದೆ ಇಲ್ಲಿನ‌ ಸುತ್ತ-ಮುತ್ತಾ ಹಳ್ಳಿಯವರು ಕಣಕ್ಕಾಗಿ ಈ ರಸ್ತೆಯನ್ನ ಬಳಸಿಕೊಳ್ತಿದ್ರು. ಆಗ ಕೆಲ ವಾಹನಗಳು ಅಲ್ಲಿದ್ದ ಜನರ ಮೇಲೆ, ಪ್ರಾಣಿಗಳ ಮೇಲೆ ಹರಿದು ಸಾಕಷ್ಟು ಸಾವುನೋವುಗಳು ಸಂಭವಿಸಿವೆ. ಈ ರಸ್ತೆಯನ್ನ ಮೈಸೂರ್ ಎಕ್ಸ್ ಪ್ರೆಸ್‌ ಹೈವೇ ಮಾಡೋದಕ್ಕೆ ಹೊರಟಿದ್ರು. ಆದ್ರೆ ಕಾರಾಣಾಂತರಗಳಿಂದ ಅರ್ಧಕ್ಕೆ ನಿಂತಿದೆ..

ಇಲ್ಲಿನ ಜನರು ದಿನನಿತ್ಯ ಈ ರಸ್ತೆಯಲ್ಲಿ‌‌ ವಾಕ್ ಮಾಡ್ತಾರೆ.. ಮಕ್ಕಳು ಸೈಕಲ್, ಸ್ಕೇಟಿಂಗ್ ಕೂಡ ಪ್ರಾಕ್ಟೀಸ್ ಮಾಡ್ತಾ ಇರ್ತಾರೆ, ಆದ್ರೆ ವಾಹನಗಳ ಸಮಸ್ಯೆಯಿಂದ, ಇಲ್ಲಿ ನಿತ್ಯ ಸಾರ್ವಜನಿಕರಿಗೆ ತೊಂದರೆಯುಂಟಾಗುತ್ತಿದೆ.. ಹೀಗಾಗಿ ವಾಹನಗಳ ಸಂಚಾರ ತಡೆಯಬೇಕೆಂದು, ನೈಸ್ ರಸ್ತೆಯ‌ ಕೊನೆಯಲ್ಲಿ ಮಣ್ಣಿನ ರಾಶಿಯನ್ನ ಹಾಕಿ ಕ್ಲೋಸ್‌ ಮಾಡಿದ್ದಾರೆ..

ಮಣ್ಣಿನ ರಾಶಿ ಹಾಕಿದ್ರೂ ಕೂಡ ಯಾವ್ದೇ ಪ್ರಯೋಜನವಾಗ್ತಿಲ್ಲ, ಯಾಕಂದ್ರೆ ಆ ರಾಶಿಯ ಮೇಲೆ ವಾಹನಗಳು ಸಂಚರಿಸುತ್ತಿವೆ... ಹಾಗೇ ಅಪಘಾತಗಳೂ ಆಗ್ತಾನೆ ಇವೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

Edited By : Manjunath H D
PublicNext

PublicNext

10/03/2022 10:24 pm

Cinque Terre

54.76 K

Cinque Terre

0

ಸಂಬಂಧಿತ ಸುದ್ದಿ