ಬೆಂಗಳೂರು: ಸರ್ಕಾರ ಸಾರ್ವಜನಿಕ ವಿಶ್ರಾಂತಿಗೆಂದು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಉದ್ಯಾನವನ ನಿರ್ಮಾಣ ಮಾಡುತ್ತದೆ. ಆದರೆ ಅಧಿಕಾರಿಗಳ ಬೇಜಾಬ್ದಾರಿತನದಿಂದ ಉದ್ಯಾನವನಗಳು ಹಾಳಾಗುತ್ತಿವೆ. ಹೌದು ಸಿ.ವಿ.ರಾಮನ್ ವಿಧಾನಸಭಾ ಕ್ಷೇತ್ರದ ಕಸ್ತೂರಿ ನಗರದ ಉದ್ಯಾನವನವು ಸರಿಯಾದ ನಿರ್ವಹಣೆಯಿಲ್ಲದೆ ಹದಗೆಟ್ಟು ಹೋಗಿದೆ.
ಉದ್ಯಾನವನದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು, ಮದ್ಯಪಾನದ ಟೆಟ್ರಾ ಪ್ಯಾಕೆಟ್ ಕಂಡು ಬಂದಿವೆ. ಸಾರ್ವಜನಿಕರ ವಿಶ್ರಾಂತಿಯ ಆಸನಗಳು, ಪಾದಚಾರಿ ರಸ್ತೆ, ಶಿಥಿಲಾವಸ್ಥೆಗೆ ತಲುಪಿವೆ. ಪಾರ್ಕಿನಲ್ಲಿ ಚರಂಡಿ ಹಾದು ಹೋಗಿದ್ದು, ಸರಾಗವಾಗಿ ನೀರು ಹರಿಯದೇ ಗಬ್ಬನಾರುತ್ತಿದೆ. ಇಡೀ ಉದ್ಯಾನವನ ಕೊಚ್ಚೆವನ ಆಗಿ ಬಿಟ್ಟಿದೆ.
Kshetra Samachara
27/02/2022 12:20 pm