ಆನೇಕಲ್: ಸರ್ಕಾರದ ಸೇವೆಗಳ ಬಗ್ಗೆ ನಾಗರಿಕರಿಗೆ ಮಾಹಿತಿ ಸುಲಭವಾಗಿ ಸಿಗುವಂತೆ ಮಾಡುವ ಉದ್ದೇಶದಿಂದ ಸಕಾಲ ಮಿಷನ್ ರಾಜ್ಯ ಸರ್ಕಾರದ ಸೇವೆಗಳಿಗೆ ಆರಂಭಿಸಲಾಗಿತ್ತು. ಆದ್ರೆ, ಈ ಸೇವೆ ಸರಿಯಾಗಿ ಸದ್ಬಳಕೆ ಆಗುತ್ತಿಲ್ಲ!.ರೈತರ ಅನುಕೂಲಕ್ಕಾಗಿ ಖಾತೆ ಬದಲಾವಣೆ, ಕೈಬಿಟ್ಟಿರುವ ಹೆಸರು ಸೇರಿಸಲು ಸಕಾಲದ ಮೂಲಕ ಅರ್ಜಿ ಸಲ್ಲಿಸಿದ್ದರೆ ಖಾತೆ ಬದಲಾವಣೆ ಮಾಡಲು ಅಧಿಕಾರಿಗಳು ಸತಾಯಿಸುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕೃಷಿಕ ವೆಂಕಟೇಶಪ್ಪ ಎಂಬವರು ಆನೇಕಲ್ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಬೇಜವಾಬ್ದಾರಿ, ನಿರ್ಲಕ್ಷ್ಯತನದಿಂದ ವರ್ಷದಿಂದಲೂ ಸತಾಯಿಸುತ್ತಾ ಕಾಲಹರಣ ಮಾಡುತ್ತಿದ್ದಾರೆ. ವೆಂಕಟೇಶಪ್ಪ ಒಂದು ವರ್ಷದ ಹಿಂದೆ ಖಾತೆ ಬದಲಾವಣೆ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದಿಂದಲೂ ಸೋಮಾರಿ ಅಧಿಕಾರಿಗಳು ಕೆಲಸ ಮಾಡಿ ಕೊಡದೆ ಸತಾಯಿಸುತ್ತಿದ್ದಾರೆ. ಇದರಿಂದ ಅಲೆದೂ ಅಲೆದು ಸುಸ್ತಾಗಿದ್ದೇನೆ ಅಂತ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಅಪ್ಲೋಡ್ ಮಾಡಿದ್ದಾರೆ. ಇಲ್ಲಿ ವಕೀಲರೊಬ್ಬರ ಪ್ರಶ್ನೆ ಮತ್ತು ರೈತರ ಈ ವಿಡಿಯೋ ವೈರಲ್ ಆಗಿದೆ.
Kshetra Samachara
14/01/2022 02:12 pm