ಬೆಂಗಳೂರು:ಮೆಟ್ರೋ ರೈಲುಗಳಲ್ಲಿ ನಿಂತು ಪ್ರಯಾಣಿಸುವಂತಿಲ್ಲ. ಸೀಟು ಸಾಮರ್ಥ್ಯಕ್ಕೆ ತಕ್ಕಂತೆ ಪ್ರಯಾಣಿಸಬೇಕು. ಸೀಟ್ ಭರ್ತಿಯಾದ್ರೆ ರೈಲು ನಿಲ್ದಾಣದೊಳಗೂ ಪ್ರವೇಶವಿಲ್ಲ. ಇದು ಬಿಎಂಆರ್ ಸಿಎಲ್ ಪ್ರಕಟಣೆ.
ಹೌದು..ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗ್ತಿರುವ ಬೆನ್ನಲ್ಲೇ ಮತ್ತಷ್ಟು ಕಠಿಣ ನಿಯಮಗಳನ್ನು ಬಿಎಂಆರ್ ಸಿಎಲ್ ಜಾರಿಗೆ ತಂದಿದೆ. ಮೆಟ್ರೋ ರೈಲು ನಿಲ್ದಾಣಕ್ಕೂ ಪ್ರಯಾಣಿಕರಿಗೆ ಪ್ರವೇಶವಿಲ್ಲ. ಸೀಟು ಭರ್ತಿಯಾದರೆ ನಂತರ ಮುಂದಿನ ರೈಲಿನಲ್ಲಿ ಪ್ರಯಾಣಿಸಬೇಕು.
ಇನ್ನೂ ವೀಕೆಂಡ್‌ನಲ್ಲಿ ಪ್ರತಿ 30 ನಿಮಿಷಕ್ಕೊಂದು ರೈಲು ಪ್ರಯಾಣ ಇರಲಿದೆ. ಈ ಹಿಂದೆ ಪ್ರತಿ 20 ನಿಮಿಷಕ್ಕೊಂದು ರೈಲು ತೆರಳುತ್ತಿತ್ತು. ಈ ಬದಲಾವಣೆ ಮಾಡಿ ಆದೇಶ ನೀಡಲಾಗಿದೆ. ಬಿಎಂಆರ್‌ಸಿಎಲ್ ನಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.
Kshetra Samachara
12/01/2022 04:44 pm