ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾದೇವಪುರ: ಕಸ ವಿಲೇವಾರಿಗೆ ಅಧಿಕಾರಿಗಳ ಮೀನಮೇಷ; ಪರಿಸರ ಕಲುಷಿತ

ಮಹಾದೇವಪುರ: ಸರ್ಕಾರಗಳು ಕಸ ನಿರ್ವಹಣೆಗೆಂದೇ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತೆ. ಆದರೆ, ಕಸ ನಿರ್ವಹಣೆ ಮಾತ್ರ ಆಗುತ್ತಿಲ್ಲ. ಹೌದು, ಕಸ ನಿರ್ವಹಣೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಯಿಂದ ಸಾರ್ವಜನಿಕರು ಸರ್ಕಾರವನ್ನು ತೆಗಳುವಂತೆ ಮಾಡುತ್ತಿದೆ.

ಬೆಂಗಳೂರು ಪೂರ್ವ ತಾಲೂಕಿನ ಮಹಾದೇವಪುರ ಕ್ಷೇತ್ರದ ಬೈರತಿ ಸಮೀಪದ ಹನುಮಂತರಾಯಪ್ಪ ಬಡಾವಣೆಯ ಮುಖ್ಯರಸ್ತೆಯಲ್ಲಿ ಕಸದ ರಾಶಿಯೇ ಬಿದ್ದಿದೆ. ಕಿಡಿಗೇಡಿ ಗಳು ಕಸದ ರಾಶಿಗೆ ಬೆಂಕಿ ಇಟ್ಟ ಪರಿಣಾಮ ದಟ್ಟ ಹೊಗೆ ಹೊರ ಹೊಮ್ಮುತ್ತಿದ್ದು, ಸುತ್ತಮುತ್ತಲಿನ ಪರಿಸರವನ್ನು ಕಲುಷಿತಗೊಳಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಂಡು ಕಾಣದವರಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

Edited By :
Kshetra Samachara

Kshetra Samachara

12/01/2022 01:39 pm

Cinque Terre

820

Cinque Terre

0

ಸಂಬಂಧಿತ ಸುದ್ದಿ