ದೊಡ್ಡಬಳ್ಳಾಪುರ: ಎಂಎಸ್ ಜಿಪಿ ಘಟಕ ಮುಚ್ಚುವಂತೆ ಪಟ್ಟು ಹಿಡಿಯುವಂತೆ ಚಿಗರೇನಹಳ್ಳಿ ಗ್ರಾಮಗಳ ಸುತ್ತಮುತ್ತಲ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಈ ಮಧ್ಯೆ ಪ್ರತಿಭಟನಾಕಾರರನ್ನು ಪೊಲೀಸ್ ಠಾಣೆಯಲ್ಲಿ ಚರ್ಚೆಗೆ ಕರೆದ ವೇಳೆ ಪೊಲೀಸ್ ಮತ್ತು ಪ್ರತಿಭಟನಾಕಾರರ ನಡುವೆ ಜಟಾಪಟಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ಕಸ ವಿಲೇವಾರಿ ಘಟಕದ ಬಗ್ಗೆ ಚರ್ಚಿಸಲು ಪ್ರತಿಭಟನಾನಿರತನ್ನು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಕರೆದಿದ್ದಾನೆ, ಈ ವೇಳೆ ಪ್ರತಿಭಟನಾಕಾರರು, ಪೊಲೀಸ್ ಠಾಣೆಯಲ್ಲೇಕೆ..? ಚರ್ಚೆಗೆ ನಾವು ಬರುವುದಿಲ್ಲ. ಏನೇ ಚರ್ಚೆ ನಡೆದರೂ ಇಲ್ಲೇ ನಡೆಯಲಿ ಎಂದು ಪಟ್ಟು ಹಿಡಿದರು. ಈ ವಿಚಾರಕ್ಕೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಜಟಾಪಟಿ ನಡೆದಿದೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.
ಮತ್ತೊಂದೆಡೆ ವಿಷಗಾಳಿ, ವಿಷನೀರು ಸೇವನೆ ಮಾಡುತ್ತಿರುವ ಜನರ ಆಕ್ರೋಶ ಕಟ್ಟೆ ಓಡೆದು ಇದೀಗ ಹೋರಾಟಕ್ಕೆ ಧುಮುಕಿದ್ದಾರೆ. ಈ ವಿಚಾರದ ಬಗ್ಗೆ ಪ್ರತಿಭಟನೆ ನಡೆಸುವ ಜಾಗದಲ್ಲಿ ಸಮಸ್ಯೆ ಇತ್ಯರ್ಥವಾಗಬೇಕೆ ಹೊರತು ಪೊಲೀಸ್ ಠಾಣೆಯಲ್ಲಿಯೇ ಚರ್ಚೆ ನಡೆಯುವಂತೆ ಮನವೊಲಿಸಲು ಕರೆದಿದ್ದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
Kshetra Samachara
26/11/2021 05:11 pm