ಬೆಂಗಳೂರು: ಜಲ ಮಂಡಳಿಯ ನೀರು ಕುಡಿಯುವ ಮುನ್ನ ಸಿಲಿಕಾನ್ ಸಿಟಿಯ ಜನರೇ, ಎಚ್ಚರ! ಏಕೆಂದರೆ ನೀರು ಕುಡಿದ ಜನರು ಆಸ್ಪತ್ರೆ ಸೇರುತ್ತಿದ್ದಾರೆ.
ಎಸ್... ಹೆಚ್ ಬಿಆರ್ ಲೇ ಔಟ್, ಟೆಲಿಕಾಂ ಲೇ ಔಟ್ ನಲ್ಲಿ ಜಲಮಂಡಳಿಯ ಕಾವೇರಿ ನೀರು ಕಲುಷಿತಗೊಂಡಿದೆ. ಕೊಳಚೆನೀರು ಕುಡಿಯುವ ನೀರಲ್ಲಿ ಸೇರುತ್ತಿರುವ ದೂರು ಕೇಳಿ ಬಂದಿದೆ.
ಇದರಿಂದ ಹೆಚ್ ಬಿಆರ್ ಲೇ ಔಟ್ , ಟೆಲಿಕಾಂ ಬಡಾವಣೆ ನಿವಾಸಿಗರಲ್ಲಿ ವಾಂತಿಭೇದಿ, ಜ್ವರ, ಹೊಟ್ಟೆ ನೋವು ಪ್ರಕರಣಗಳು ಹೆಚ್ಚಾಗಿದ್ದು, ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಕಲುಷಿತ ನೀರು ಲ್ಯಾಬ್ ಟೆಸ್ಟ್ ಗೆ ಕಳುಹಿಸಿದಾಗ ಒಳಚರಂಡಿ ನೀರು ಮಿಕ್ಸ್ ಆಗಿರೋದು ದೃಢಪಟ್ಟಿದೆ!
ಈ ಬಗ್ಗೆ ಸ್ಥಳೀಯ ಬೆಂಗಳೂರು ಜಲ ಮಂಡಳಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ವಾರಗಳಿಂದ ಕಲುಷಿತ ನೀರು ಮನೆಗೆ ಬರುತ್ತಿದ್ದು, ಬಿಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳು ಕೇರ್ ಮಾಡ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.
Kshetra Samachara
15/11/2021 06:48 pm