ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದಾಸರಹಳ್ಳಿಯ ತಗ್ಗು ಪ್ರದೇಶದ ಬಡಾವಣೆಗಳಿಗೆ ನುಗ್ಗಿದ ಮಳೆ ನೀರು

ಬೆಂಗಳೂರು: ತಡರಾತ್ರಿ ಬೆಂಗಳೂರಿನ ಹಲವೆಡೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಟಿ.ದಾಸರಹಳ್ಳಿಯ ರುಕ್ಮಿಣಿ ನಗರ, ಗುಂಡಪ್ಪ ಲೇಔಟ್, ಬೈರವೇಶ್ವರ ನಗರ, ಆರ್‌ಬಿ‌ಎಸ್ ಲೇಔಟ್ ಸೇರಿದಂತೆ ಹಲವೆಡೆ ತಗ್ಗು ಪ್ರದೆಶದ ಮನೆಗಳಿಗೆ ರಾಜಕಾಲುವೆ, ಮೋರಿ ನೀರು ನುಗ್ಗಿದೆ. ಇನ್ನು ವಾಹನ ಸವಾರರು ಪರದಾಟ ಕೇಳುವಂತಿಲ್ಲ.

ಅಲ್ಲದೆ ಬಡಾವಣೆ ಚೇಂಬರ್ ನೀರು ತುಂಬಿ ಹರಿದು ಕೆರೆಯಂತಾಗಿದೆ. ರಸ್ತೆ ಗುಂಡಿಗಳು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದ್ದ ಬಗ್ಗೆ ತಡರಾತ್ರಿ ಪರಿಸ್ಥಿತಿ ನಿಭಾಯಿಸಲು ಕುದ್ದು ಸಮಸ್ಯೆ ಅರಿಯಲು ಟಿ.ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಉಪಸ್ಥಿತರಿದ್ದರು. ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಶಾಸಕ ಆರ್.ಮಂಜುನಾಥ್ ಸೂಚನೆ ನೀಡಿದರು.

Edited By : Shivu K
Kshetra Samachara

Kshetra Samachara

18/05/2022 10:20 pm

Cinque Terre

2.3 K

Cinque Terre

0

ಸಂಬಂಧಿತ ಸುದ್ದಿ