ಬೆಂಗಳೂರು: ನಿನ್ನೆ ಸುರಿದ ಭಾರಿ ಮಳೆಗೆ ಜಯದೇವ ಅಂಡರ್ಪಾಸ್ ಸಂಪೂರ್ಣವಾಗಿ ಮುಳುಗಿ ಹೋಗಿತ್ತು. ಇಂದು ಮಧ್ಯಾಹ್ನ ಆದರೂ ಕೂಡ ನೀರು ನಿಧಾನವಾಗಿ ಇಳಿಮುಖ ಆಗುತ್ತಿತ್ತು. ಇದರಿಂದ ವಾಹನ ಸವಾರರು ಬನ್ನೇರುಘಟ್ಟ ರಸ್ತೆಯಲ್ಲಿ ಪರದಾಡಬೇಕಾಯಿತು ಆಂಬುಲೆನ್ಸ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸ ಪಡುವಂತಾಯಿತು.
ಜಯದೇವ ಅಂಡರ್ ಪಾಸ್‌ನಲ್ಲಿ ಮೋರಿ ಮಣ್ಣಿನಿಂದ ತುಂಬಿದೆ ಎಂದು ಒಂದು ವಾರಗಳ ಹಿಂದೆಯಷ್ಟೇ ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು ಆದರೂ ಕೂಡ ಎಚ್ಚೆತ್ತುಕೊಳ್ಳದ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷದಿಂದ ನಿನ್ನೆ ರಾತ್ರಿ ಜೈದೇವ ಅಂಡರ್ಪಾಸ್ ನೀರಿನಿಂದ ತುಂಬಿ ಹೋಗಿತ್ತು.
ಈ ಬಗ್ಗೆ ನಮ್ಮ ಪ್ರತಿನಿಧಿ ನವೀನ್ ಮಾಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
02/05/2022 07:29 pm