ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

900 ವರ್ಷಗಳ ದಿನ್ನೆ ಆಂಜನೇಯ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ತಡೆ

ದೊಡ್ಡಬಳ್ಳಾಪುರ : ಮುಜರಾಯಿ ಇಲಾಖೆಗೆ ಸೇರಿದ ದಿನ್ನೆ ಆಂಜನೇಯ ದೇವಸ್ಥಾನಕ್ಕೆ 900 ವರ್ಷಗಳ ಇತಿಹಾಸವಿದೆ.

ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆಯೇ ತೊಂದರೆ ನೀಡುತ್ತಿದೆ, ರಸ್ತೆಗೆ ಚೆಲ್ಲಿಕಲ್ಲು ಹಾಕುವ ಮೂಲಕ ಭಕ್ತರು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸಿದರು.

ದೊಡ್ಡಬಳ್ಳಾಪುರ ತಾಲೂಕಿನ ಪೆರಮಗೊಂಡನಹಳ್ಳಿಯ ಬಳಿ ದಿನ್ನೆ ಆಂಜನೇಯ ದೇವಸ್ಥಾನವಿದೆ, ಬೆಂಗಳೂರಿನ ಜಾಲಹಳ್ಳಿ, ದೊಡ್ಡಬಳ್ಳಾಪುರ ಸೇರಿದಂತೆ ಹೊರ ರಾಜ್ಯದವರು ಆಂಜನೇಯ ಸ್ವಾಮಿಯ ಒಕ್ಕಲು,ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಕ್ಕೆ 900 ವರ್ಷಗಳ ಇತಿಹಾಸವಿದೆ, ಆಂಧ್ರಪ್ರದೇಶ ಪೆನಗೊಂಡದಿಂದ ಜನರು ಈ ಪ್ರದೇಶದಲ್ಲಿ ವಾಸವಾಗಿದ್ದು,ಮೈಸೂರು ಮಹಾರಾಜರ ಕಾಲದಲ್ಲಿ ಇಲ್ಲಿನ ಜನರು ಬೆಂಗಳೂರಿನ ಜಾಲಹಳ್ಳಿಗೆ ಸ್ಥಳಾಂತರಗೊಂಡರು.

ಹಬ್ಬ ಹರಿದಿನಗಳಲ್ಲಿ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ, ದೇವಸ್ಥಾನಕ್ಕೆ ರಸ್ತೆ ಮಾಡಿಸಿ ಶ್ರೀಕ್ಷೇತ್ರವನ್ನ ಅಭಿವೃದ್ಧಿ ಮಾಡಿಸಬೇಕೆಂಬುದು ಭಕ್ತರ ಬೇಡಿಕೆ. ವಿಶೇಷ ಅನುದಾನದಲ್ಲಿ ರಸ್ತೆ ಕಾಮಾಗಾರಿ ಸಹ ಪ್ರಾರಂಭವಾಗಿತ್ತು. ಆದರೆ ರಸ್ತೆ ಜಾಗ ಅರಣ್ಯ ಇಲಾಖೆಗೆ ಸೇರಿದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ರಸ್ತೆ ಕಾಮಾಗಾರಿಯನ್ನ ನಿಲ್ಲಿಸಿದೆ.

ದೇವಸ್ಥಾನದ ಸುತ್ತಮುತ್ತ 30 ಎಕರೆ ಜಮೀನು ಇದ್ದು, ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ, ದೇವಸ್ಥಾನ ಮತ್ತು ಸಾಗುವಳಿ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳು ರೈತರಿಗೆ ವಿನಾ ಕಾರಣ ತೊಂದರೆ ಕೊಡುತ್ತಿದ್ದಾರೆ, ಈಗ ದೇವಸ್ಥಾನಕ್ಕೆ ರಸ್ತೆ ನಿರ್ಮಿಸಲು ಸಹ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಕೆರಳಿದ ಭಕ್ತರು ರಸ್ತೆಗೆ ಚೆಲ್ಲಿಕಲ್ಲು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು, ತಮಟೆ ಹೊಡೆಯುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ರೈತರು ಬಿಟ್ಟಿಕೊಡಲು ಸಿದ್ದರಿದ್ದಾರೆ, ಆದರೆ ದೇವಸ್ಥಾನಕ್ಕೆ ರಸ್ತೆ ನಿರ್ಮಿಸ ಬೇಕೆನ್ನುವುದು ರೈತರ ಬೇಡಿಕೆಯಾಗಿದೆ.

Edited By : Somashekar
Kshetra Samachara

Kshetra Samachara

15/08/2022 03:18 pm

Cinque Terre

3.1 K

Cinque Terre

0

ಸಂಬಂಧಿತ ಸುದ್ದಿ