ಬೆಂಗಳೂರು: 1970 - 80 ರ ದಶಕದಲ್ಲಿ ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಬಸ್ ಗಳ ಸಂಚಾರವಾಗಿತ್ತು.333 ಸಂಖ್ಯೆಯ ಡಬಲ್ ಡೆಕ್ಕರ್ ಬಸ್ ಆಗಿನ ಕಾಲದಲ್ಲಿ ಫೇಮಸ್ ಆಗಿತ್ತು.ಆದ್ರೆ ಆಗಿನ ಬಿಎಂಟಿಸಿ ಎಸ್ ಸಂಸ್ಥೆ 1997 ರಲ್ಲೀ ಕ್ರಮೇಣವಾಗಿ ಡಬಲ್ ಡೆಕ್ಕರ್ ಬಸ್ ಸೇವೆ ನಿಲ್ಲಿಸಲಾಯಿತು.ಅಂತಹದೇ ಬಸ್ ಗಳು ಮತ್ತೊಮ್ಮೆ ಹೊಸ ಅವತಾರದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಿಳಿಸಲು ನಿರ್ಧಾರ ಮಾಡಲಾಗಿದೆ.
(ಬಿಎಂಟಿಸಿ) 10 ಡಬಲ್ ಡೆಕ್ಕರ್ ಎಸಿ ಇ-ಬಸ್‌ಗಳನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದೆ.ಪರಿಸರ ಸ್ನೇಹಿ ಬಸ್‌ಗಾಗಿ 140 ಕೋಟಿ ರೂಪಾಯಿ ಖರ್ಚುಮಾಡಲಾಗಿದೆ.ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್‌ಗಳ ಸೇರ್ಪಡೆ ಇದೀಗ ಬಿಎಂಟಿಸಿ ಸಂಸ್ಥೆಗೆ ಸೇರಿದೆ.ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ (ಎನ್‌ಸಿಎಪಿ) ಅಡಿಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಬಿಬಿಎಂಪಿಗೆ 140 ಕೋಟಿ ರೂಪಾಯಿ ಮಂಜೂರಾಗಿದೆ.
2021-2022ರ ವಾಯು ಗುಣಮಟ್ಟ ಸುಧಾರಣೆಗಾಗಿ ಕೇಂದ್ರವು15ನೇ ಹಣಕಾಸು ಆಯೋಗದ ಅನುದಾನದಡಿ 140 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಾರಿಗೆ, ಕೆಎಸ್‌ಪಿಸಿಬಿ, ಟ್ರಾಫಿಕ್ ಪೊಲೀಸ್‌ನಂತಹ ಇಲಾಖೆಗಳ ಕಾಮಗಾರಿಗಳ ಅನುಷ್ಠಾನಕ್ಕೆ ಸೂಕ್ಷ್ಮ ಮಟ್ಟದ ಕ್ರಿಯಾ ಯೋಜನೆಯಂತೆ ಈ ಮೊತ್ತವನ್ನು ನಿಗದಿಪಡಿಸಲಾಗಿದೆಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.
ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ (FAME ) ಯೋಜನೆ ಅಡಿಯಲ್ಲಿ ಸೇರ್ಪಡೆಗೊಂಡ ಇ-ಬಸ್‌ಗಳಿಗಾಗಿ 15 ಬಸ್ ಡಿಪೋಗಳ ವಿದ್ಯುದ್ದೀಕರಣಗೊಳಿಸಲಾಗುತ್ತಿದ್ದು,ಅದಕ್ಕೆ 20 ಕೋಟಿ ರೂಪಾಯಿ ಮೀಸಲಿಡಲಾಗಿದೆ.10 ಕೋಟಿ ರೂಪಾಯಿ ಬಸ್‌ಗಾಗಿ ಮೀಸಲಿಡಲಾಗಿದೆ.ಸರ್ಕಾರದ 140 ಕೋಟಿ ರೂಪಾಯಿಗಳಲ್ಲಿ ಐದು ಡಬಲ್ ಡೆಕ್ಕರ್ ಇ-ಬಸ್ ಗಳಿಗೆ ರೂ.10 ಕೋಟಿ ಮೀಸಲಿಡಲಾಗಿದೆ. ಐದು ಇ-ಬಸ್‌ಗಳನ್ನು ಖರೀದಿಸಲು ಯೋಜಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚುವರಿಯಾಗಿ, ಅವರು ಇನ್ನೂ ಐದು ಅಂತಹ ಬಸ್‌ಗಳಿಗೆ ಹಣವನ್ನು ಕೋರಿ ನಗರ ಭೂ ಸಾರಿಗೆ ನಿರ್ದೇಶನಾಲಯ (DULT)ನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
Kshetra Samachara
17/09/2022 10:55 pm