ಮಹದೇವಪುರ: ಕರ್ನಾಟಕ ಗೃಹ ಮಂಡಳಿ ಸಂಯುಕ್ತ ವಸತಿ ಯೋಜನೆಯಡಿಯಲ್ಲಿ ನೀಡಲಾಗಿರುವ ವಸತಿ ಮನೆಗಳಿಗೆ ಮಳೆ ನೀರು ನುಗ್ಗಿ ಪರಿಣಾಮದಿಂದಾಗಿ ಜನರು ಓಡಾಡಲು ಹರಸಾಹಸ ಪಡುವಂತಾಗಿದೆ..
ಹೊಸಕೋಟೆ ಹೋಬಳಿ ಮಹದೇವಪುರ ಕ್ಷೇತ್ರದ ಬಿದರಹಳ್ಳಿಯಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿನ ಸಂಕಷ್ಟ ಎದುರಿಸುವಂತಾಗಿದೆ..
2013 ರಲ್ಲಿ ಅವೈಜ್ಞಾನಿಕವಾಗಿ ಮನೆಗಳು ನಿರ್ಮಿಸಿದ್ದರಿಂದ ಈ ಸಮಸ್ಯೆ ಉದ್ಭವವಾಗಿದೆ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್ ತಿಳಿಸಿದರು. ಈ ಕುರಿತು ಹಲವು ಬಾರಿ ಸ್ಥಳೀಯ ಶಾಸಕರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ವಸತಿ ಪಕ್ಕದಲ್ಲಿ ಕೆರೆಯಿರುವುದರಿಂದ ಕೆರೆ ತುಂಬಿದ ಬಳಿಕ ನೀರು ಹೊರ ಬಂದು ಮನೆಗಳಿಗೆ ನುಗ್ಗುತ್ತದೆ ಎಂದರು.
ಇಂದು ಸ್ಥಳಕ್ಕೆ ಬೆಂಗಳೂರು ಪೂರ್ವ ತಾ.ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುವುದಾಗಿ ಸ್ಥಳೀಯರು ತಿಳಿಸಿದರು..
PublicNext
06/08/2022 02:37 pm