ರಿಪೋರ್ಟ್ - ರಂಜಿತಾಸುನಿಲ್.
ಬೆಂಗಳೂರು: ಇಲ್ಲಿ ಎಲ್ಲಿ ನೋಡಿದ್ರು ಬಸ್ ಸ್ಟಾಪ್ ಇಲ್ಲ.. ಎಲ್ಲಿದೆ ಸ್ವಾಮಿ ಬಸ್ ಸ್ಟಾಪ್ ಅಂತ ಹುಡುಕುವ ಪರಿಸ್ಥಿತಿ ಈ ಏರಿಯಗಳದ್ದು, ಒಂದು ಕಡೆ ಬಸ್ ಸ್ಟಾಪ್ ಇದ್ರೆ ಮತ್ತೊಂದು ಕಡೆ ಬಸ್ ಸ್ಟಾಪ್ ಇಲ್ಲ. ಶಾಲಾ,ಕಾಲೇಜಿನ ಮಕ್ಕಳು, ಸಾರ್ವಜನಿಕರು ನಡು ರಸ್ತೆಯಲ್ಲೆ ಬಸ್ ಗಾಗಿ ಕಾಯುವ ಪರಿಸ್ಥಿತಿ ಕ್ರಿಯೇಟ್ ಆಗಿದೆ. ಇದ್ರಿಂದ ಮಕ್ಕಳು ಹಲವಾರು ತೊಂದರೆ ಅನುಭವಿಸುತ್ತಿದ್ದಾರೆ.
ಬಸ್ ಸ್ಟಾಪ್ ಇಲ್ಲದೇ ಇರೋದ್ರಿಂದ ನಡು ರಸ್ತೆಯಲ್ಲಿ ಬಸ್ ನಿಲ್ಸಿದ್ರೆ ಹಿಂದೆ ಬರುವ ವಾಹನಗಳು ಸಡನ್ ಬ್ರೇಕ್ ಹಾಕಿ ಅಪಘಾತ ಆಗೋ ಚಾನ್ಸಸ್ಸ್ ಬಹಳಷ್ಟಿದೆ. ಅಂದಹಾಗೆ ನಾವಿಷ್ಟೊತ್ತು ಹೇಳಿದ್ದು, ಬಿಜಿಎಸ್ ಕಾಲೇಜಿನಿಂದ ಉತ್ತರಳ್ಳಿ ವರೆಗೂ ಸಾಗೋ ಏರಿಯಾದಲ್ಲಿ 5-6 ಕಡೆ ಬಸ್ ಸ್ಟಾಪ್ ಗಳೇ ಇಲ್ದಂತಾಗಿದೆ. ಇದರ ಬಗ್ಗೆ ಯಾವೊಬ್ಬ ಅಧಿಕಾರಿಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಜನರ ಗೋಳು ಕೇಳೋರಲ್ಲ. ಇದರ ಬಗ್ಗೆ ಒಂದು ವಾಕ್ ಥ್ರೂ ಇಲ್ಲಿದೆ ನೋಡಿ.
PublicNext
15/07/2022 08:47 pm