ಬೆಂಗಳೂರು: ಇಂದು ಬಿಎಂಟಿಸಿ ಬಸ್ ನಂಬಿ ನೀವು ಮನೆಯಿಂದ ಹೊರಗಡೆ ಬರುತ್ತಿದ್ದೀರಾ ? ಹಾಗಾದ್ರೆ ಬಸ್ ನಂಬಿಕೊಂಡು ಹೊರಡೋ ಮುನ್ನ ಕೊಂಚ ಯೋಚನೆ ಮಾಡಲೇಬೇಕು.ಯಾಕೆಂದ್ರೆ, ಬಿಎಂಟಿಸಿ ಬಸ್ ಸಂಚಾರ ವ್ಯತ್ಯಯ ಆಗಲಿದೆ.
ಹೌದು. ಬಿಎಂಟಿಸಿ ಡೀಸೆಲ್ ಕೊರತೆ ಎದುರಿಸುತ್ತಿದೆ. ಡಿಪೋ ನಂಬರ್-22 ಸೇರಿದಂತೆ ಕೆಲವು ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಈ ಕಾರಣಕ್ಕೆ ಬಹುತೇಕ ಡಿಪೋಗಳಲ್ಲಿ ಡೀಸೆಲ್ ಖಾಲಿ ಆಗೋ ಸಾಧ್ಯತೆ ಹೆಚ್ಚಿದೆ.
ಬಿಎಂಟಿಸಿ ಸಗಟು ಖರೀದಿ ದರ ಎಫೆಕ್ಟ್ ನಿಂದ ಈಗ ತತ್ತರಿಸುತ್ತಿದೆ. ಹೀಗಾಗಿಯೇ ಚಿಲ್ಲರೆ ವ್ಯಾಪಾರಿಗಳಿಂದ ನಿಗಮ ಡೀಸೆಲ್ ಖರೀದಿಸುತ್ತಿತ್ತು. ಆದರೆ, ಕಳೆದ ಮೂರು ದಿನಗಳಿಂದಲೂ ಚಿಲ್ಲರೆ ವ್ಯಾಪಾರಿಗಳಿಂದಲೂ ಡೀಸೆಲ್ ಸಪ್ಲೈ ಆಗ್ತಾನೇ ಇಲ್ಲ. ಹೀಗಾಗಿಯೇ ಬಿಎಂಟಿಸಿ ಡಿಪೋಗಳಲ್ಲಿ ಭಾರೀ ಡೀಸೆಲ್ ಕೊರೆ ಎದುರಾಗಿದೆ.
PublicNext
27/06/2022 10:50 am