ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವರು ಜಸ್ಟ್ ಮಿಸ್

ಬೆಂಗಳೂರು: ಮೊದಲೇ ಬೆಂಗಳೂರಿನ ರಸ್ತೆಗಳು ಗುಂಡಿ ಮಯವಾಗಿದೆ. ಅದರಲ್ಲೂ ಮಳೆ ಬಂದರೆ ಸಾಕು ರಸ್ತೆ ಗುಂಡಿಗಳು ಮಳೆನೀರಿನಿಂದ ತುಂಬಿ ದ್ವಿಚಕ್ರವಾಹನ ಸವಾರರಿಗೆ ರಸ್ತೆಯಲ್ಲಿದೆ ಗುಂಡಿ ಎಲ್ಲಿದೆ ಎನ್ನುವುದೇ ಗೊತ್ತಾಗಲ್ಲ. ಮೊನ್ನೆ ಸುರಿದ ಭಾರಿ ಮಳೆಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಗುಂಡಿಗಳು ನೀರಿನಿಂದ ತುಂಬಿ ರಸ್ತೆಯ ಮೇಲೆ ಮಳೆನೀರು ನದಿಯಂತೆ ವೇಗವಾಗಿ ಹರಿಯುತ್ತಿತ್ತು. ಇದೇ ರಸ್ತೆಯ ಮೇಲೆ hsr ಲೇಔಟ್ ನಿವಾಸಿಯಾದ ಪಲ್ಲವಿ ಹುಳಿಮಾವು ನಿಂದ ಜೆಪಿನಗರದ ಕಡೆ ಪ್ರಯಾಣಿಸುತ್ತಿದ್ದರು. ಆದರೆ ಜೋರಾಗಿ ಸುರಿದಿದ್ದ ಮಳೆ ನಿಂದ ರಸ್ತೆಯ ಮೇಲೆ ಮಳೆನೀರು ನದಿಯಂತೆ ವೇಗವಾಗಿ ಬರುತ್ತಿತ್ತು ನೀರಿನ ರಭಸದಿಂದ ದ್ವಿಚಕ್ರವಾಹನ ಮತ್ತು ಆಟೋಗಳು ರಸ್ತೆಯ ಮೇಲೆ ಚಲಿಸಲಾರದೆ ರಸ್ತೆಯ ಬದಿಯಲ್ಲೇ ನಿಲ್ಲುವ ಸ್ಥಿತಿ ನಿರ್ಮಾಣಗೊಂಡಿತ್ತು.

ಪಲ್ಲವಿ ಕೂಡ ತಮ್ಮ ದ್ವಿಚಕ್ರವಾಹನದಲ್ಲಿ ಇದೇ ರಸ್ತೆಯ ಮೇಲೆ ಚಲಿಸಿಕೊಂಡು ಬರುವಾಗ ರಸ್ತೆಯ ಮೇಲೆ ಇದ್ದ ಗುಂಡಿ ಕಾಣದೆ ರಸ್ತೆ ಮೇಲೆ ನದಿಯಂತೆ ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಬಿದ್ದು ಹೋದರು ಕೂಡಲೇ ಅಕ್ಕ ಪಕ್ಕದಲ್ಲಿ ನಿಂತಿದ್ದ ವಾಹನ ಸವಾರರು ಇವರ ನೆರವಿಗೆ ಧಾವಿಸಿ ಪಲ್ಲವಿ ಅವರನ್ನು ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ದಿಂದ ಬಚಾವ್ ಮಾಡಿದ್ದಾರೆ. ರಸ್ತೆಯ ಮೇಲೆ ಇದ್ದ ಗುಂಡಿ ಕಾಣದೆ ದ್ವಿಚಕ್ರವಾಹನ ದಿಂದ ಬ್ಯಾಲೆನ್ಸ್ ತಪ್ಪಿ ಬಿದ್ದ ಪಲ್ಲವಿ.

ಇದೇ ದಿನ ಕೆಆರ್ ಪುರಂನಲ್ಲಿ ಕೂಡ ಸುರಿದ ಭಾರಿ ಮಳೆಗೆ ಇಬ್ಬರೂ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು ಮತ್ತು ಕೆಲವು ವರ್ಷಗಳ ಹಿಂದೆ ಇದೇ ಬನ್ನೇರುಘಟ್ಟ ರಸ್ತೆಯಲ್ಲಿ ಮಳೆ ನೀರಿನಿಂದ ತುಂಬಿದ್ದ ಮೋರಿಯಲ್ಲಿ 8 ವರ್ಷದ ಬಾಲಕಿ ಕೊಚ್ಚಿಕೊಂಡು ಹೋಗಿದ್ದಳು. ಅದೃಷ್ಟ ವರ್ಷ ಸ್ಥಳೀಯರು ಕೂಡಲೇ ಪಲ್ಲವಿ ಅವರನ್ನು ಕೂಡಲೇ ರಕ್ಷಣೆ ಮಾಡಿ ದಿಂದ ಬನ್ನೇರುಘಟ್ಟ ರಸ್ತೆಯಲ್ಲಿ ನಡಿ ಬೇಕಾದ ದುರ್ಘಟನೆ ತಪ್ಪಿದೆ. ಈಗಾದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಯ ಮೇಲೆ ಸಾವಿಗಾಗಿ ಕಾಯುತ್ತಿರುವ ರಸ್ತೆಗುಂಡಿಗಳನ್ನು ಮುಚ್ಚಬೇಕು.

ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.

Edited By :
PublicNext

PublicNext

23/06/2022 07:50 pm

Cinque Terre

29.33 K

Cinque Terre

1

ಸಂಬಂಧಿತ ಸುದ್ದಿ