ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ ಕಸ ಅಕ್ರಮ ವಿಲೇವಾರಿ; ವಾಹನ ತಡೆದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಆನೇಕಲ್ : ಬಿಬಿಎಂಪಿ ವ್ಯಾಪ್ತಿಯ ಕಸ ತಂದು ಅಕ್ರಮವಾಗಿ ವಿಲೇವಾರಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕಸದ ವಾಹನಗಳನ್ನು ತಡೆದು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ. ದೊಡ್ಡತೋಗೂರು ಗ್ರಾಪಂ ವ್ಯಾಪ್ತಿಯ ಮೈಲಸಂದ್ರ ಗ್ರಾಮದಲ್ಲಿ ಘಟನೆ ನಡೆದಿದೆ.

ಮೈಲಸಂದ್ರ ಬಳಿಯ ಕಲ್ಲುಕ್ವಾರಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಸಾವಿರಾರು ಟನ್ ಕಸ ತಂದು ಈಗಾಗಲೇ ವಿಲೇವಾರಿ ಮಾಡಿದ್ದು, ಸುತ್ತಮುತ್ತಲ ವಾತಾವರಣ ʼವಿಷಮಯʼ ವಾಗಿದೆ. ಸೊಳ್ಳೆ, ನೊಣಗಳ ಕಾಟ ಶುರುವಾಗಿದೆ. ದುರ್ವಾಸನೆಯಿಂದ ಗ್ರಾಮಸ್ಥರು ಹೈರಾಣಾಗಿದ್ದಾರೆ.

ಇಲ್ಲಿ ಕಸ ಹಾಕದಂತೆ ಹಲವು ಬಾರಿ ಎಚ್ಚರಿಸಿದ್ದರೂ ಪ್ರಯೋಜನವಾಗಿಲ್ಲ. ಕೆಲ ಪ್ರಭಾವಿಗಳ ಕುಮ್ಮಕ್ಕಿನಿಂದ ಬೊಮ್ಮನಹಳ್ಳಿ ಹಾಗೂ‌ ಬೆಂ. ದಕ್ಷಿಣ ವ್ಯಾಪ್ತಿಯ ಬಿಬಿಎಂಪಿ ಕಸ ತಂದು ವಿಲೇವಾರಿ ಮಾಡುತ್ತಿದ್ದಾರೆ. ಹೀಗಾಗಿ ಕಸದ ವಾಹನ ತಡೆದು ಇಂದು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ಸ್ಥಳೀಯರಾದ ನವೀನ್ ತಿಳಿಸಿದ್ದಾರೆ.

ಇದೇ ಜಾಗದಲ್ಲಿ 9 ಎಕರೆ ಜಾಗವನ್ನು ಕ್ರೀಡಾಂಗಣಕ್ಕಾಗಿ ಮೀಸಲಿಡಲಾಗಿದೆ. ಇದೇ ಜಾಗದಲ್ಲಿ ಕಸ ಹಾಕುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By :
PublicNext

PublicNext

17/06/2022 07:50 am

Cinque Terre

33.41 K

Cinque Terre

0

ಸಂಬಂಧಿತ ಸುದ್ದಿ