ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಇರಲಿ ಎಚ್ಚರ... ಉಸಿರು ಕಸಿಯಲು ಕಾದಿವೆ ಟ್ರಾನ್ಸ್‌ಫಾರ್ಮರ್‌!

ನೆಲಮಂಗಲ: ಹೀಗೆ ಕೈಗೆಟುಕುವಂತಿರೋ ಟ್ರಾನ್ಸ್‌ಫರ್ಮರ್. ಅದಕ್ಕೆ ಬಿಗಿದಪ್ಪಿರುವ ಗಿಡಬಳ್ಳಿ, ರಸ್ತೆಯಲ್ಲಿ ಓಡಾಡೋ ಜನರನ್ನ ಕೈಬೀಸಿ ಕರೆಯುವಂತಿರುವ ಹೈ ವೋಲ್ಟೇಜ್ ವಿದ್ಯುತ್ ವಯರ್‌! ಹೌದು... ರಸ್ತೆ ಪಕ್ಕ‌ ಯಾವುದೇ ಸುರಕ್ಷತೆ ಕ್ರಮವಿಲ್ಲದೆ ಈ ರೀತಿ ತಳಮಟ್ಟದಲ್ಲಿ ಅಳವಡಿಸಿರೋ ವಿದ್ಯುತ್ ಟಿಸಿ ಮತ್ತು ಅದರಿಂದ ಸ್ಕಿನ್ ಔಟ್ ಆಗಿ ಹೊರಬಂದ ಕೇಬಲ್ ವಯರ್‌ ಗಳ ಡೇಂಜರಸ್ ದೃಶ್ಯ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿ.

ಈಗಾಗಲೇ ಮುಂಗಾರು ಮಳೆಗೂ ಮುನ್ನವೇ ಗಾಳಿ-ಮಳೆಯಿಂದಾಗಿ ಸಾಕಷ್ಟು ಕಡೆ ಸಮಸ್ಯೆ ಎದುರಾಗಿದೆ. ನೆಲಮಂಗಲ ನಗರದ ಹಲವೆಡೆ 20ಕ್ಕೂ ಹೆಚ್ಚು ಟ್ರಾನ್ಸ್‌‌ಫಾರ್ಮ‌ರ್‌ ಅಪಾಯವನ್ನ ಕೈಬೀಸಿ ಕರೆಯುತ್ತಿದೆ. ನಿಗದಿತ ಎತ್ತರಕ್ಕಿಂತ ತಳಮಟ್ಟದಲ್ಲಿ ಅಳವಡಿಸಿರೋ ಟಿಸಿಗಳಿಗೆ ನಿಯಮದಂತೆ ತಂತಿಬೇಲಿ ಅಳವಡಿಸಬೇಕಾಗುತ್ತದೆ.

ಜೊತೆಗೆ ನೀರಿನ ಮೋಟರ್‌ ಗಳ ಸ್ವಿಚ್ ಬೋರ್ಡ್ ಗಳನ್ನು ಕಂಬಕ್ಕೆ ಅಳವಡಿಸಿರುವುದರಿಂದ ಸಮಸ್ಯೆ ಹೆಚ್ಚಾಗಿದೆ. ಟಿಸಿಗಳಿಂದ ಬಂದ ಕೇಬಲ್‌ ಹೊರಕ್ಕೆ ಬಂದಿವೆ. ಗಾಳಿ-ಮಳೆ ಸಂದರ್ಭ ಜನ್ರಿಗೆ ಎಲ್ಲಿ ಯಾವಾಗ ವಿದ್ಯುತ್ ಸ್ಪರ್ಶಿಸುತ್ತೋ ಅನ್ನೋ ಆತಂಕದಲ್ಲಿದ್ದಾರೆ.

ಅಲ್ಲದೆ, ತಳಮಟ್ಟದಲ್ಲಿರೋ ಟಿಸಿ ಸುತ್ತಲೂ ಕೆಲವೆಡೆ ತಂತಿ ಬೇಲಿ ಅಳವಡಿಸಿದ್ರೆ ಇನ್ನು ಕೆಲವೆಡೆ ಹಾಗೇ ಬಿಡಲಾಗಿದೆ. ಈ ಹಿಂದೆ ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ರೂ ಕ್ಯಾರೇ ಅನ್ನುತ್ತಿಲ್ಲ. ಟಿಸಿ ಎತ್ತರಕ್ಕೇರಿಸಲು ಮತ್ತು ಸ್ಥಳಾಂತರಿಸಲು ಬೆಸ್ಕಾಂ ಅಧಿಕಾರಿ, ಸಿಬ್ಬಂದಿಗೆ ಹಣ ನೀಡಬೇಕಾಗಿದೆ.

ಇನ್ನಾದ್ರೂ ಬೆಸ್ಕಾಂ ಅಧಿಕಾರಿ, ಇಂಜಿನಿಯರ್‌ ಗಳು ಎಚ್ಚೆತ್ತು ತಂತಿಬೇಲಿ ಅಳವಡಿಸಿ. ಇಲ್ಲವಾದಲ್ಲಿ, ಬೆಸ್ಕಾಂ ಕಚೇರಿ ಎದುರು ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೆಸ್ಕಾಂ ಎಇಇ ಯನ್ನ ಪ್ರಶ್ನಿಸಿದ್ರೆ "ನಾನು ಇತ್ತೀಚೆಗೆ ಡ್ಯೂಟಿ ರಿಪೋರ್ಟ್ ಮಾಡ್ಕೊಂಡಿದ್ದೇನೆ. ಗಮನಕ್ಕೆ ತಂದಿದ್ದೀರಿ, ಸ್ಪಾಟ್ ಇನ್ಸ್ಪೆಕ್ಷನ್ ಮಾಡಿ ಕೂಡಲೇ ಸರಿ ಪಡಿಸುತ್ತೇನೆ" ಎಂದು ಹೇಳಿದರು.

Edited By :
PublicNext

PublicNext

29/05/2022 12:31 pm

Cinque Terre

38.6 K

Cinque Terre

0

ಸಂಬಂಧಿತ ಸುದ್ದಿ