ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಾರದ ಪಾಸ್ ಪರಿಚಯಿಸಿದ ಬಿಎಂಆರ್‌ಸಿಎಲ್ ..! ಫಸ್ಟ್ ಬ್ರೇಕ್ ಮಾಡಿದ್ದ ಪಬ್ಲಿಕ್ ನೆಕ್ಸ್ಟ್

ವರದಿ - ಗಣೇಶ್ ಹೆಗಡೆ

ಬೆಂಗಳೂರು: ಸಿಲಿಕಾನ್ ಸಿಟಿಯ ಪರ್ಯಾಯ ಸಾರಿಗೆ ವ್ಯವಸ್ಥೆ ಎಂದು ಕರೆಸಿಕೊಳ್ಳುವ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರಿಗೆ ವಾರದ ಪಾಸ್ ದೊರೆಯುವ ದಿನ ಬಂದಿದೆ.

ಹೌದು.. ವಾರದ ಐದು ದಿನಗಳ ನಮ್ಮ ಮೆಟ್ರೋ ಪಾಸ್ ಬಿಎಂಆರ್ ಸಿಎಲ್ ನೀಡಲು ಮುಂದಾಗಿದೆ. ಈ ಬಗ್ಗೆ ಪಬ್ಲಿಕ್ ನೆಕ್ಸ್ಟ್ 2022ರ ಮೇ 9 ರಂದು ವರದಿ ಮಾಡಿತ್ತು. ಅದ ರಂತೆ ಬಿಎಂಆರ್ ಸಿಎಲ್ ಅಧಿಕಾರಿಗಳು ಪ್ರಯಾಣಿಕರ ಅನುಕೂಲಕ್ಕಾಗಿ 5 ದಿನದ ಪಾಸ್ ಪರಿಚಯಿಸಿದ್ದಾರೆ.

ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ವಾರದಲ್ಲಿ ಐದು ದಿನದ ಪಾಸ್ ವ್ಯವಸ್ಥೆ ಮುಂದಿನ ಸೋಮಾವರ ಮೇ.23 2022ರಂದು ಜಾರಿಗೆ ಬರಲಿದೆ. ಇದರ ದರ 550 ರೂ ಆಗಲಿದೆ.

ಇನ್ನೂ BMRCL 1 ದಿನದ ಮತ್ತು 3 ದಿನದ ಪಾಸ್​ಗಳನ್ನು ತಿಂಗಳ ಹಿಂದೆ ಪರಿಚಯಿಸಿತ್ತು. 200 ರೂಗಳ ಬೆಲೆಯ 1 ದಿನದ ಪಾಸ್ ದರದಲ್ಲಿ ಮರುಪಾವತಿಸಬಹುದಾದ ಭದ್ರತಾ ಠೇವಣಿ ರೂ 50 ಇರುತ್ತದೆ. ಇದು ಖರೀದಿ ದಿನಾಂಕದಂದು ಮಾತ್ರ ನಮ್ಮ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣವನ್ನು ಅನುಮತಿಸುತ್ತದೆ. 400 ರೂಗಳ ಬೆಲೆಯ 3 ದಿನಗಳ ಪಾಸ್​ ದರದಲ್ಲಿ ಮರುಪಾವತಿಸಬಹುದಾದ ಭದ್ರತಾ ಠೇವಣಿ 50 ರೂಪಾಯಿಗಳನ್ನು ಒಳಗೊಂಡಿದೆ. ಈ ಪಾಸ್​ ಖರೀದಿಸಿದ ದಿನದಿಂದ 3 ದಿನಗಳವರೆಗೆ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣವನ್ನು ಅನುಮತಿಸುತ್ತದೆ. ಇದೀಗ 5 ದಿನದ ಪಾಸ್ ಕೂಡಾ ಭದ್ರತಾ ಠೇವಣಿ 50 ರೂಪಾಯಿಗಳನ್ನು ಒಳಗೊಂಡಿದೆ. ಈ ಪಾಸ್​ ಖರೀದಿಸಿದ ದಿನದಿಂದ 5 ದಿನಗಳವರೆಗೆ ಮೆಟ್ರೋದಲ್ಲಿ ಅನಿಯಮಿತ ಪ್ರಯಾಣವನ್ನು ಮಾಡಬಹುದಾಗಿದೆ.

Edited By : Nagaraj Tulugeri
Kshetra Samachara

Kshetra Samachara

20/05/2022 08:12 pm

Cinque Terre

2.32 K

Cinque Terre

0

ಸಂಬಂಧಿತ ಸುದ್ದಿ