ಬೆಂಗಳೂರು: ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್‌ಗೆ ಹೆಸರು ವಾಸಿಯಾಗಿದೆ. ಇಲ್ಲಿ ನೂರಾರು ಜನರು ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಸಿಲ್ಕ್ ಬೋರ್ಡ್ ಬಸ್‌ಗಳಿಗೆ ಬ್ಯುಸಿ ಜಂಕ್ಷನ್ ಆಗಿದೆ.
ಸಿಲ್ಕ್ ಬೋರ್ಡ್ ಜಂಕ್ಷನ್ ಬೆಂಗಳೂರಿನ ಎಲ್ಲಾ ಭಾಗಗಳಿಗೆ ಪ್ರಯಾಣಿಸುವ ಬಸ್‌ಗಳಿಂದ ಕಾರ್ಯನಿರತವಾಗಿರುತ್ತದೆ. ಆದರೆ ಇಲ್ಲಿ ಸರಿಯಾದ ಬಸ್ ನಿಲ್ದಾಣ ಇರಲಿಲ್ಲ. ಇದೀಗ ಹೊಸ ಬಸ್ ನಿಲ್ದಾಣ ಸಾರ್ವಜನಿಕರ ಬಳಕೆಗೆ ಸಿದ್ಧವಾಗುತ್ತಿದೆ. ಹೊಸ ಬಸ್ ನಿಲ್ದಾಣ ಸಿದ್ಧಗೊಂಡರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಬಸ್ ನಿಲ್ದಾಣದ ಪಕ್ಕದಲ್ಲಿ ಮೆಟ್ರೋ ನಿಲ್ದಾಣವೂ ಸಿದ್ಧವಾಗುತ್ತಿದೆ. ಆದ್ದರಿಂದ ನೀವು ಸಿಲ್ಕ್ ಬೋರ್ಡ್‌ನಿಂದ ಬೆಂಗಳೂರಿನ ಯಾವುದೇ ಭಾಗಗಳಿಗೆ ಪ್ರಯಾಣಿಸಬಹುದು. ಶೀಘ್ರದಲ್ಲೇ ಈ ಎರಡು ಯೋಜನೆಗಳು ಸಾರ್ವಜನಿಕರಿಗೆ ಸಿದ್ಧವಾಗಲಿದೆ.
ನವೀನ ಪಬ್ಲಿಕ್ ನೆಕ್ಸ್ಟ್
ಬೆಂಗಳೂರು
PublicNext
20/04/2022 08:55 pm