ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಹುವಿಧದ ಬಡತನ ನಿವಾರಣೆ ಆಗಬೇಕಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ನಮ್ಮ ದೇಶದಲ್ಲಿ ಆರ್ಥಿಕ ಬಡತನವೊಂದೇ ಅಲ್ಲ. ಬಹು ವಿಧದ ಬಡತನ ನಿವಾರಣೆಯಾಗಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಅವರು ಇಂದು ದಿ.ನಡ್ಜ್ ಫೌಂಡೇಷನ್‌ನ ದಿ.ನಡ್ಜ್ ಇನ್ಸ್ಟಿಟ್ಯೂಟ್‌ಅನ್ನು ಉದ್ಘಾಟಿಸಿ ಮಾತನಾಡಿದರು.

ಅರಿವಿನ ಕೊರತೆ, ಸಾಮಾಜಿಕ ಅನಿಷ್ಟಗಳು ಕೂಡ ಬಡತನವೇ ಎಂದು ಅವರು ನುಡಿದರು. ಆದ್ದರಿಂದ ಬಡತನವನ್ನು ಬಹು ಆಯಾಮಗಳಲ್ಲಿ ನಿವಾರನೆ ಮಾಡುವ ಅಗತ್ಯವಿದೆ ಎಂದರು. ಸಮಾಜದಲ್ಲಿ ಉನ್ನತಿ ಸಾಧಿಸಿದ ಪ್ರತಿಯೊಬ್ಬರು, ಸಮಾಜಕ್ಕೆ ತಮ್ಮ ಕೊಡುಗೆ ನೀಡುವ ಅಗತ್ಯವಿದೆ. ಆಗ ಅವಕಾಶ ವಂಚಿತರಾದ ಇನ್ನಷ್ಟು ಜನರ ಉನ್ನತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದಿ ನಡ್ಜ್ ಫೌಂಡೇಷನ್ ವಿವಿಧ ಕಾರ್ಪೊರೇಟ್ ಕಂಪೆನಿಗಳ ಸಹಯೋಗದೊಂದಿಗೆ ಬಡತನ ನಿವಾರಣೆ, ಗ್ರಾಮೀಣಾಭಿವೃದ್ಧಿ ಮತ್ತು ಕೌಶಲ್ಯಾಭಿವೃದ್ಧಿಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ, ಐಟಿ ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ.ಅಶ್ವತ್ಥನಾರಾಯಣ ಮಾತನಾಡಿ, ರಾಜ್ಯ ಸರ್ಕಾರ ಯುವಕರು ಹಾಗೂ ಮಹಿಳೆಯರ ಉದ್ಯಮಶೀಲತೆ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. ಸಮಾರಂಭದಲ್ಲಿ ದಿ ನಡ್ಜ್ ಫೌಂಡೇಷನ್ ಮುಖ್ಯಸ್ಥ ಅತುಲ್ ಸತೀಜ, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮತ್ತಿತರ ಗಣ್ಯರು ಭಾಗವಹಿಸಿದ್ದರು..

Edited By : Manjunath H D
PublicNext

PublicNext

19/03/2022 08:08 am

Cinque Terre

39.28 K

Cinque Terre

0

ಸಂಬಂಧಿತ ಸುದ್ದಿ