ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊರಮಾವು ವಾರ್ಡ್ ಕಲ್ಕೆರೆ ಕೆರೆ ಕೋಡಿ 2 ಅಡಿ ತಗ್ಗಿಸಲು ಮುಖ್ಯ ಆಯುಕ್ತ ಸೂಚನೆ

ವರದಿ: ಗಣೇಶ್ ಹೆಗಡೆ

ಬೆಂಗಳೂರು: ಕೆ.ಆರ್.ಪುರ ಹೊರಮಾವು ವಾರ್ಡ್ ವ್ಯಾಪ್ತಿಯಲ್ಲಿ ಹೆಬ್ಬಾಳ ವ್ಯಾಲಿ ಪಕ್ಕದಲ್ಲಿರುವ ಬಡಾವಣೆ ಹಾಗೂ ಸುತ್ತಮುತ್ತಲಿನ ವಸತಿ ಪ್ರದೇಶ ಜಲಾವೃತ ವಾಗುವುದನ್ನು ತಡೆಯಲು ಕಲ್ಕೆರೆ ಕೆರೆ ಕೋಡಿಯನ್ನು ಎರಡು ಅಡಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸ್ಥಳ ಪರಿಶೀಲನೆ ವೇಳೆ ಮಾತನಾಡಿದ ಮುಖ್ಯ ಆಯುಕ್ತರು, ಹೆಬ್ಬಾಳ ವ್ಯಾಲಿ ಹಾಗೂ ಕಲ್ಕೆರೆ ಪಕ್ಕದಲ್ಲಿ ಬಾಲಾಜಿ ಲೇಔಟ್, ಕಾವೇರಿ ನಗರ, ಸಾಯಿ ಲೇಔಟ್ ಹಾಗೂ ಸುತ್ತಮುತ್ತಲಿನ ಬಡಾವಣೆ, ವಸತಿ ಪ್ರದೇಶ ತಗ್ಗು ಪ್ರದೇಶದಲ್ಲಿರುವ ಕಾರಣ ಮನೆಗಳಿಗೆ ನೀರು ನುಗ್ಗುತ್ತಿದೆ. ಈ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಬ್ಬಾಳ ವ್ಯಾಲಿಯಲ್ಲಿ ಹರಿದು ಬರುವ ಮಳೆನೀರು ಕಾಲುವೆ ತುಂಬಿ ಹಿನ್ನೀರು ವಡ್ಡರಪಾಳ್ಯ, ಸಾಯಿಬಾಬ ಬಡಾವಣೆ, ಅನುಗ್ರಹ ಬಡಾವಣೆ ಜಲಾವೃತಗೊಳ್ಳಲಿವೆ. ಹೆಬ್ಬಾಳ ವ್ಯಾಲಿಗೆ ಈಗಾಗಲೇ ಕೆಲವು ಭಾಗದಲ್ಲಿ ಆರ್.ಸಿ.ಸಿ. ತಡೆಗೋಡೆ ನಿರ್ಮಿಸಿದ್ದು, ಉಳಿದೆಡೆಯ ಕಚ್ಚಾ ರಾಜಕಾಲುವೆಗೆ ಆರ್.ಸಿ.ಸಿ. ತಡೆಗೋಡೆ ನಿರ್ಮಿಸಿ ಬಡಾವಣೆಗಳಿಗೆ ನೀರು ನುಗ್ಗದಿರಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಹೆಬ್ಬಾಳ ವ್ಯಾಲಿ ಹಾದುಹೋಗುವ ಭಾಗದಲ್ಲಿ ರೈಲ್ವೆ ಹಳಿ ಬಳಿ 5 ಮೀ. ಅಗಲದ 2 ವೆಂಟ್‌ಗಳಿದ್ದು, ಹಾಲಿ ಕಿರಿದಾಗಿರುವ ವೆಂಟ್‌ಗಳನ್ನು ಅಗಲೀಕರಣ ಮಾಡುವ ಕೆಲಸ ಆಗಬೇಕಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ತಪಾಸಣೆ ವೇಳೆ ನಗರಾಭಿವೃದ್ಧಿ ಸಚಿವರ ಭೈರತಿ ಬಸವರಾಜು, ಮಹದೇವಪುರ ವಲಯ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಜಂಟಿ ಆಯುಕ್ತ ವೆಂಕಟಾಚಲಪತಿ, ಮುಖ್ಯ ಇಂಜಿನಿಯರ್ ಗಳಾದ ಪರಮೇಶ್ವರ್, ಸುಗುಣಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

24/11/2021 10:53 am

Cinque Terre

128

Cinque Terre

0

ಸಂಬಂಧಿತ ಸುದ್ದಿ