ಬೆಂಗಳೂರು: ಈಗ ಖಾಲಿಯಾಗಿ ಕಾಣುತ್ತಿರುವ ಈ ರಸ್ತೆಯು ಒಂದು ಕಾಲದಲ್ಲಿ ಹೆಚ್ಚು ಬಳಕೆಯಲ್ಲಿತ್ತು. ಆದರೆ ಈಗ ಈ ರಸ್ತೆ ಮುಚ್ಚಿ ವರ್ಷಗಳೇ ಕಳೆದಿವೆ.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಿಂದ ಸಿಲ್ಕ್‌ಬೋರ್ಡ್ ಸಂಪರ್ಕ ಕಲ್ಪಿಸುವ ರಸ್ತೆಯನ್ನು 2 ವರ್ಷಗಳಿಂದ ಮುಚ್ಚಲಾಗಿದೆ. ಎಚ್‌ಎಸ್‌ಆರ್ ಲೇಔಟ್ 4ನೇ ಬ್ಲಾಕ್‌ನಲ್ಲಿ ಮನೆ ಕಳ್ಳತನ ಪ್ರಕರಣ ಹಾಗೂ ಇತರ ಪ್ರಕರಣಗಳು ವರದಿಯಾದ ನಂತರ ಪೊಲೀಸರು ಕಳ್ಳತನ ನಿಯಂತ್ರಿಸಲು ಈ ರಸ್ತೆಯನ್ನು ಮುಚ್ಚಿದ್ದರು.
ಈ ರಸ್ತೆಯನ್ನು ಮುಚ್ಚಿರುವುದರಿಂದ ಜನರು ಸಿಲ್ಕ್ ಬೋರ್ಡ್ ರಸ್ತೆ ಸೇರಲು 1km ದೂರ ಹೋಗಬೇಕಾಗಿದೆ. ಒಂದು ವೇಳೆ ಈ ರಸ್ತೆ ತೆರೆದರೆ ಆಂಬ್ಯುಲೆನ್ಸ್‌ಗಳು ಸಿಲ್ಕ್‌ಬೋರ್ಡ್ ಟ್ರಾಫಿಕ್ ದಾಟಿ ಹೊಸೂರು ರಸ್ತೆಯತ್ತ ಹೋಗಲು ಸಹಕಾರಿಯಾಗುತ್ತದೆ ಮತ್ತು ಸಾರ್ವಜನಿಕರು ರಸ್ತೆಯನ್ನು ಬಳಸಬಹುದು.
ಕೂಡಲೇ ಪೊಲೀಸರು ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎನ್ನುವುದು ಪಬ್ಲಿಕ್ ಆಗ್ರಹ.
ನವೀನ್, ಪಬ್ಲಿಕ್ ನೆಕ್ಸ್ಟ್,
ಬೆಂಗಳೂರು.
PublicNext
08/04/2022 09:53 pm