ಬೆಂಗಳೂರು - ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ತರಕಾರಿ ಬೆಲೆ ಒಂದೇ ಸಮನೆ ಏರ್ತಾನೆ ಇದೆ. ಗಾಯದ ಮೇಲೆ ಬರೆ ಎಂಬಂತೆ ಇದೀಗ ಗೃಹ ನಿರ್ಮಾಣೋದ್ಯಮದ ವಸ್ತುಗಳ ಬೆಲೆಯೂ ದಿಢೀರ್ ಏರಿಕೆಯಾಗ್ತಿದ್ದು, ಜನ ಕಂಗಾಲಾಗುವಂತೆ ಮಾಡಿದೆ.. ಸಿಮೆಂಟ್, ಕಬ್ಬಿಣದ ಬೆಲೆ ಕೇಳಿ ಜನಸಾಮಾನ್ಯರ ನಿದ್ದೆಗೆಡಿಸಿದೆ.
ಒಂದು ತಿಂಗಳಿಂದಲೂ ಸಿಮೆಂಟ್ ದರ ಏರಿಕೆಯಾಗ್ತಿದ್ದು, ಕಬ್ಬಿಣದ ಬೆಲೆಯಂತೂ ಕೈಗೆಟುಕುತ್ತಿಲ್ಲ.. ಎಲ್ಲ ಕಂಪನಿಗಳ ಸಿಮೆಂಟ್ ನಲ್ಲಿ 50 ರಿಂದ 70 ರೂ. ಏರಿಕೆಯಾಗಿದ್ದು, ಕಬ್ಬಿಣದಲ್ಲಂತು ಒಂದೆ ಬಾರಿಗೆ 10,000 ಸಾವಿರದಷ್ಟು ಏರಿಳಿತ ಕಾಣ್ತಿದೆ..ಸಿಮೆಂಟ್ ರೇಟ್ ಒಂದು ತಿಂಗಳಿನಲ್ಲಿ 3 ರಿಂದ 4 ಬಾರಿ ದರದಲ್ಲಿ ಏರಿಕೆ ಕಂಡಿದೆ.. ಹಳೆಯ ರೇಟ್ ಗೆ ಹೋಲಿಸಿದ್ರೆ 50 kg ಸಿಮೆಂಟ್ ಮೂಟೆಯ ದರ ಇವತ್ತಿಗೆ 200 ರೂ. ನಷ್ಟು ಜಾಸ್ತಿಯಾಗಿದೆ..
ಸಿಮೆಂಟ್ ರೇಟ್..
ಹಳೆಯ ದರ
310 ಇದ್ದ ಬೆಲೆ
370 ಇದ್ದ ರೇಟ್
415 ಇದ್ದ ರೇಟ್
ಇವತ್ತಿನ ದರ
ಫೆ- 1 ರಲ್ಲಿ 370 ರೂ..
ಮಾರ್ಚ್ 1 ರಲ್ಲಿ 415 ರೂ..
ಇವತ್ತಿಗೆ 425 ರೂ.
ಒಂದು ಟನ್ ಕಬ್ಬಿಣದ ದರದಲ್ಲಿ 30 ರಿಂದ 32 ಬಾರಿ ವ್ಯತ್ಯಾಸ ಕಂಡಿದೆ..
ಫೆ-8 ರಲ್ಲಿ 68,900 + ರೂ
ಫೆ-15 ರಲ್ಲಿ 66,900 - ರೂ
ಫೆ- 21ರಲ್ಲಿ 68,500+ ರೂ
ಫೆ-25 ರಲ್ಲಿ 71,400+ ರೂ
ಮಾರ್ಚ್ 1 ರಲ್ಲಿ- 75,200 ರೂ
ಮಾರ್ಚ್-5 ರಲ್ಲಿ 80,600+ ರೂ
ಇವತ್ತಿನ ದರ 86,100 + ರೂ ಆಗಿದೆ..
ಹೀಗೆ ಬೆಲೆ ಏರಿಕೆಗೆ ಕಾರಣ ಏನು? ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗ್ತಿಲ್ಲ ಏಕೆ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಆದ್ರೆ ಮನೆ ಕಟ್ಟಲು ಮುಂದಾದ ಜನ ಮಾತ್ರ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ರಂಜಿತ ಎಂ. ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
09/03/2022 08:48 pm