ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಗರದಲ್ಲಿ ಹೈ ಫೈ ಚಪ್ಪಲಿ ಕಳ್ಳರಿದ್ದಾರೆ ಎಚ್ಚರ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಣ, ಒಡವೆ ಕಾರು ಬೈಕು ಕಳ್ಳರು ಕಡಿಮಾಯದ್ರೂ ಈ ಚಪ್ಪಲಿ ಕಳ್ಳರು ಮಾತ್ರ ಕಡಿಮೆಯಾಗಲ್ಲ. ಮನೆ ಬಾಗಿಲಲ್ಲಿ ಇರೋ ಚಪ್ಪಲಿಯನ್ನು ಈ ಕಳ್ಳರು‌ ಬಿಡೋದಿಲ್ಲ. ಅದ್ರಲ್ಲೂ ಈ ಕಳ್ಳರು ಅಪಾರ್ಟ್ಮೆಂಟ್ ಗಳಲ್ಲೆ ಹೆಚ್ಚಾಗಿ ಕೃತ್ಯ ನಡೆಸ್ತಾರೆ.

ಯಾಕಂದ್ರೆ ಒಂದು ಅಪಾರ್ಟ್ಮೆಂಟ್ ಗೆ ನುಗ್ಗಿದ್ರೆ ಏನಿಲ್ಲ ಅಂದ್ರೂ ಹತ್ತರಿಂದ ಇಪ್ಪತ್ತು ಜೊತೆ ಚಪ್ಪಲಿ ಶೂ ಗಳು ಸಿಗ್ತಾವೆಂದು ಈ ರೀತಿ ಅಪಾರ್ಟ್ಮೆಂಟ್ ಗಳಲ್ಲೇ ಈ ಚಪ್ಪಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ನಗರದ ಬೆಳ್ಳಂದೂರಿನ ಅಪಾರ್ಟ್ಮೆಂಟ್ ನಲ್ಲಿ ಚಪ್ಪಲಿಗಳ ಕಳ್ಳತನ ಮಾಡಿರೋ ಕಳ್ಳರ ಕೃತೆ ಸಿಸಿಟಿವಿಯಲ್ಲಿ ಸೆರೆಯಾಗಿದೆ‌. ರಾತ್ರಿ ಹೋತ್ತು ರಾಶಿ ರಾಶಿ ಚಪ್ಪಲಿ ಕದ್ದು ಮೂಟೆ ಕಟ್ಟಿಕೊಂಡು ಹೋಗೋ ಈ ಕಳ್ಳರು ಸೆಕೆಂಡ್ ಮಾರ್ಕೆಟ್ ನಲ್ಲಿ ಚಪ್ಪಲಿ ಶೂ ಗಳನ್ನಮಾರಾಟ ಮಾಡ್ತಾರೆ.

Edited By : Somashekar
Kshetra Samachara

Kshetra Samachara

14/09/2022 05:01 pm

Cinque Terre

3.59 K

Cinque Terre

0

ಸಂಬಂಧಿತ ಸುದ್ದಿ