ಬೆಂಗಳೂರು: ಮಗನನ್ನು ತಬ್ಬಿಕೊಂಡು ಅಳುತ್ತಿರುವ ಪೋಷಕರು, ಪೋಷಕರನ್ನು ನೋಡಿದ ಖುಷಿ ಮಗನಿಗೆ.ಇಂತಹ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಬಿಟಿಎಂ ಲೇಔಟ್.ಅಲ್ಲಿಏನಾಗಿತ್ತು ಅಂತ ತಿಳಿಯಲು ಈ ಸ್ಟೋರಿ ಒಮ್ಮೆ ನೋಡಿ.
ಒಂದೆರಡು ತಿಂಗಳು ಅಲ್ಲ ಬರೋಬ್ಬರಿ ಒಂದು ವರ್ಷ ನಂತರ ತನ್ನ ತಾಯಿಯನ್ನು ಮತ್ತೆ ಸೇರಿದ್ದಾನೆ ಈ ಬಾಲಕ . ಅದಿಕ್ಕೆ ಕಾರಣವಾಗಿದ್ದು ಬೆಂಗಳೂರಿನ ಮೂರು ಯುವಕರು.
ಬಿಟಿಎಂ ಲೇಔಟ್ ರಸ್ತೆಯ ಮೇಲೆ ಅನಾಥವಾಗಿ ತಿರುಗಾಡುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಿದ್ದರು ಯುವಕರಾದ ನಿತಿನ್, ಶ್ರೀಧರ್ ಮತ್ತು ರಾಜಣ್ಣ.
ರಾಜಣ್ಣ ಅವರು ಬಿಟಿಎಂ ಲೇಔಟ್‌ನಲ್ಲಿ ಬೇಕರಿ ಇಟ್ಟಿದ್ದು ಬೇಕರಿಗೆ ದಿನವೂ ಬರುತ್ತಿದ್ದ ನಿತಿನ್ ಮತ್ತು ಶ್ರೀಧರ್ ಈ ಬಾಲಕ ಸುಹಾಸ್ ನನ್ನು ನೋಡಿ ಮಾತನಾಡಿಸಿದಾಗ ಮನೆಯಿಂದ ಕಳೆದುಹೋಗಿ ರಸ್ತೆಗಳ ಮೇಲೆ ತಿರುಗಾಡುತ್ತಿದ್ದಾನೆ ಎಂದು ಗೊತ್ತಾಗುತ್ತದೆ. ಆದರೆ ಸುಹಾಸ್‌ಗೆ ತನ್ನ ಊರಿನ ಹೆಸರು ಕೂಡ ಗೊತ್ತಿಲ್ಲದೆ ಇರುವುದನ್ನು ಗಮನಿಸಿದ ಇವ್ರು ಮರಳಿ ಮನೆ ತಲುಪಿಸುವ ಪ್ರಯತ್ನ ಬಿಡಲೇ ಇಲ್ಲ.
ಹುಡುಗನಿಗೆ ಬೇಕರಿಯಲ್ಲಿ ಇರಲು ಜಾಗ ಕೊಟ್ಟು ಹೇರ್ ಕಟಿಂಗ್ ಮತ್ತು ಹೊಸ ಬಟ್ಟೆ ಕೊಡಿಸಿ ಆತನನ್ನು ಅಲ್ಲೇ ಇಟ್ಟುಕೊಂಡು ಹುಡುಗನ ಊರನ್ನು ಹುಡುಕಲು ಯುವಕರು ಮುಂದಾಗುತ್ತಾರೆ. ಫೇಸ್‌ಬುಕ್ ಮೂಲಕ ಹುಡುಗನ ಅಣ್ಣನನ್ನು ಹುಡುಕಿ ಅಣ್ಣನೊಂದಿಗೆ ಮಾತನಾಡಿ ಈತ ಬೆಂಗಳೂರಿನಲ್ಲಿ ಸಿಕ್ಕಿರುವ ಬಗ್ಗೆ ಮಾಹಿತಿ ನೀಡುತ್ತಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಕೂಡಲೇ ಕುಟುಂಬವು ವೆಸ್ಟ್ ಬೆಂಗಾಲ್ ನಿಂದ ಬೆಂಗಳೂರಿನ ಕಡೆ ಹೊರಟು ಬರುತ್ತಾರೆ.
ಸುಹಾಸ್ ಮೂಲತಃ ವೆಸ್ಟ್ ಬೆಂಗಲ್ ನಿವಾಸಿ ಆಗಿದ್ದಾನೆ. ತನ್ನ ಸ್ನೇಹಿತರ ಜೊತೆ ಕಣ್ಣಾಮುಚ್ಚಾಲೆ ಆಟವಾಡುವಾಗ ಅಲ್ಲೇ ನಿಂತಿದ್ದ ಗೂಡ್ಸ್ ಟ್ರೈನ್‌ನಲ್ಲಿ ಬಚ್ಚಿ ಕೊಂಡಿರುತ್ತಾನೆ. ಗೂಡ್ಸ್ ಟ್ರೈನ್‌ನಲ್ಲಿ ತಲೆಸುತ್ತಿ ಬಿದ್ದಿದ್ದ ಈತ ಕಣ್ಣುಬಿಟ್ಟಾಗ ಆತ ಯಾವುದೋ ಊರು ಸೇರಿದ್ದ. ಅಲ್ಲಿಂದ ತನಗೆ ಗೊತ್ತಿಲ್ಲದ ಟ್ರೈನ್ ಹತ್ತಿ ಊರು ಊರು ಸುತ್ತಿ ಕೊನೆಗೆ ಬೆಂಗಳೂರು ಬಂದು ತಲುಪಿದ್ದ.
ಬೆಂಗಳೂರು ತಲುಪಿದ ಸುಹಾಸ್ ಕೊನೆಗೆ ಬಿಟಿಎಂ ಲೇಔಟ್‌ನ ಮೂವರು ಯುವಕರಿಗೆ ಸಿಕ್ಕಿ ಈಗ ಮರಳಿ ತನ್ನ ಗೂಡನ್ನು ಸೇರಿದ್ದಾನೆ.
ಈ ಮೂವರು ಯುವಕರಿಂದ ಕೊನೆಗೂ ಒಂದು ವರ್ಷಗಳ ನಂತರ 2,000 ಕಿಲೋಮೀಟರ್ ದೂರ ಪ್ರಯಾಣ ಮಾಡಿ ಮತ್ತೆ ತನ್ನವರನ್ನು ಸೇರಿದ್ದಾನೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
24/06/2022 07:08 pm