ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: ʼಭೂ ತಾಯಿ‌ʼ ಮಡಿಲು ಸೇರಿದ ಆರ್.ಎಲ್. ಜಾಲಪ್ಪ

ದೊಡ್ಡಬಳ್ಳಾಪುರ: ಹಿರಿಯ ರಾಜಕೀಯ ಮುತ್ಸದ್ಧಿ ಆರ್.ಎಲ್. ಜಾಲಪ್ಪ‌ ಅವರ ಪಾರ್ಥಿವ ಶರೀರವನ್ನು ಇಂದು ಸಂಜೆ ‌ʼಆರ್. ಎಲ್.‌ ಜಾಲಪ್ಪʼ ಎಂಜಿನಿಯರಿಂಗ್ ಕಾಲೇಜಿನ ಬಳಿಯಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಸಿ, ದಫನ ಮಾಡಲಾಯಿತು.

ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸುಧಾಕರ್ ಭಾಗಿಯಾಗಿದ್ದರು. ಪೊಲೀಸ್ ಬ್ಯಾಂಡ್ ನೊಂದಿಗೆ ಪಾರ್ಥಿವ ಶರೀರದ ಮೇಲಿದ್ದ ರಾಷ್ಟ್ರ ಧ್ವಜವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ಮೃತರ ಗೌರವಾರ್ಥ ಮೂರು ಸುತ್ತು ಗುಂಡು ಹಾರಿಸಲಾಯಿತು.

ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ. ವೀರಪ್ಪ ಮೊಯ್ಲಿ, ಉಗ್ರಪ್ಪ ಸಹಿತ ಹಲವು ರಾಜಕೀಯ ಮುಖಂಡರು, ನಾನಾ ಕ್ಷೇತ್ರಗಳ ಗಣ್ಯರು ಭಾಗಿಯಾದರು.

Edited By : Nagesh Gaonkar
Kshetra Samachara

Kshetra Samachara

18/12/2021 06:11 pm

Cinque Terre

686

Cinque Terre

0

ಸಂಬಂಧಿತ ಸುದ್ದಿ