ಬೆಂಗಳೂರು: ಕೊರೊನಾ 3ನೇ ವ್ಯಾಪಕವಾಗಿ ಹರಡ್ತಿದೆ. ಇದ್ರಲ್ಲಿ ನಮ್ಮನ್ನು ಕಾಯೋ ಪೊಲೀಸ್ರು ಕೂಡ ಪರಿತಪಿಸ್ತಿದ್ದಾರೆ. ನಗರದಲ್ಲಿ ಇಲ್ಲಿವರೆಗೆ 212 ಪೊಲೀಸ್ರಿಗೆ ಸೋಂಕು ತಗಲಿದ್ದು, ಇದ್ರಲ್ಲಿ ಕೇವಲ 12 ಮಂದಿ ಗುಣಮುಖರಾಗಿದ್ದಾರೆ. ಇನ್ನು, 212 ಸಿಬ್ಬಂದಿ ಪೈಕಿ 211 ಸಿಬ್ಬಂದಿ 2 ಡೋಸ್ ವ್ಯಾಕ್ಸಿನ್ ಪಡೆದವರೆ ಆಗಿದ್ದಾರೆ. ಇಂದು ಒಂದೇ ದಿನ 67 ಪೊಲೀಸ್ರಿಗೆ ಸೋಂಕು ತಗುಲಿದೆ!
ಕಳೆದ ನವೆಂಬರ್ ನಿಂದ ಇಲ್ಲಿವರೆಗೂ ಪೊಲೀಸ್ರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಫೈನ್ ನಲ್ಲೂ ದಾಖಲೆ ಬರೆದಿದ್ದಾರೆ. ಎರಡೂವರೆ ತಿಂಗಳಲ್ಲಿ 83,63,750 ರೂ. ದಂಡ ವಸೂಲಿ ಮಾಡಿದ್ದಾರೆ. ಇದ್ರಲ್ಲಿ 32608 ಮಾಸ್ಕ್ ಫೈನ್ ಹಾಕಿ 83,38,250 ರೂ. ವಸೂಲಾಗಿದ್ರೆ 123 ಸೋಶಿಯಲ್ ಡಿಸ್ಟೆನ್ಸ್ ಕೇಸ್ ಹಾಕಿ 25,500 ರೂ. ದಂಡ ವಸೂಲಿ ಮಾಡಿದ್ದಾರೆ.
ನಗರದ ಒಟ್ಟು 20,313 ಪೊಲೀಸ್ರ ಪೈಕಿ 20,077 ಮಂದಿಗೆ ಫಸ್ಟ್ ಡೋಸ್ ವ್ಯಾಕ್ಸಿನ್ ಆಗಿದ್ರೆ, 19512 ಪೊಲೀಸ್ರಿಗೆ 2ನೇ ಡೋಸ್ ವ್ಯಾಕ್ಸಿನ್ ಹಾಗೂ 3440 ಪೊಲೀಸ್ರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ.
Kshetra Samachara
12/01/2022 08:14 pm