ಬೆಂಗಳೂರು : ವೀಕೆಂಡ್ ಕರ್ಫ್ಯೂ ಸಭೆ ಹಿನ್ನೆಲೆ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಹಾಗೂ ಕಮಿಷನರ್ ಕಮಲ್ ಪಂತ್ ಹಾಗೂ ಬೆಂಗಳೂರು ಡಿಸಿ ಮಂಜುನಾಥ್ ಪೂರ್ವ ಭವಿ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಗೌರವ ಗುಪ್ತ ಹಾಗೂ ಕಮಿಷನರ್ ಮಾತನಾಡಿ. ಇಂದು ಸಿಎಂ ಜೊತೆಯಲ್ಲಿ ಸಭೆ ಇದೆ ಈ ಹಿನ್ನೆಲೆಯಲ್ಲಿ ಪೂರ್ವಾಭಾವಿಯಾಗಿ ಸಭೆ ಮಾಡಿದ್ದೇವೆ ಯಾವೇಲ್ಲಾ ಕ್ರಮಕೈಗೊಳ್ಳುವುದರ ಬಗ್ಗೆ ತೀರ್ಮಾನ ಮಾಡಬೇಕಿದೆ.
ನಮ್ಮ ಸಲಹೆಯನ್ನು ಮುಖ್ಯಮಂತ್ರಿಯವರ ಮುಂದೆ ಇಡುತ್ತೇವೆ. ವೀಕೆಂಡ್ ಕರ್ಫ್ಯೂ ಬಗ್ಗೆ ತಜ್ಞರು ಹೇಳುತ್ತಾರೆ. ನಮ್ಮ ಸಲಹೆಗಳನ್ನ ಸಭೆಯಲ್ಲಿ ತಿಳಿಸುವುದಾಗಿ ಬಿಬಿಎಂಪಿ ಆಯಕ್ತ ಗೌರವ್ ಗುಪ್ತ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಇಂದು ಸಿಎಂ ನೇತೃತ್ವದಲ್ಲಿ ಸಭೆ ಇದೆ. ಅದಕ್ಕಾಗಿ ಪೂರ್ವಭಾವಿ ಸಭೆ ಮಾಡಿದ್ದೇವೆ. ನಮ್ಮ ಸಲಹೆಗಳು ಏನು ಇಲ್ಲ. ತಜ್ಞರು ಏನು ಮಾತನಾಡ್ತಾರೆ ನೋಡ್ಕೊಂಡು ನಾವು ನಮ್ಮ ಅಭಿಪ್ರಾಯ ಹೇಳುತ್ತೇವೆ ಸರ್ಕಾರ ಯಾವ ಕ್ರಮಕೈಗೊಳ್ಳಿ ಅಂತಾರೆ ಅದನ್ನ ತೆಗೆದುಕೊಳ್ಳುತ್ತೇವೆ. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಫಾಲೋ ಮಾಡುತ್ತೇವೆ. ಎಂದರು.
PublicNext
21/01/2022 02:07 pm