ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫೆ.28 ರವರೆಗೂ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಫೆಬ್ರವರಿ 28 ರವರೆಗೂ ಮುಂದುವರೆಸಿ ಪೊಲೀಸ್ ಕಮಿಷನರ್ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.

144 ಸೆಕ್ಷನ್ ಯಥಾವತ್ತಾಗಿ ಮುಂದುವರೆಯಲಿದ್ದು, ಧರಣಿ, ಪ್ರತಿಭಟನೆ, ಮೆರವಣಿಗೆಗಿಲ್ಲ ಅವಕಾಶ ಇರುವುದಿಲ್ಲ. ನಿಬಂಧನೆಗಳು ಯಥಾವತ್ ಮುಂದುವರಿಯಲಿದ್ದು, ಒಳಾಂಗಣ ಮದುವೆ ಸಮಾರಂಭಕ್ಕೆ 200 ಜನ ಮಾತ್ರ ನೀಡಲಾಗಿದೆ. ಹೊರಾಂಗಣ ಸಮಾರಂಭಕ್ಕೆ 300 ಮಂದಿಗೆ ಅವಕಾಶ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ ಕೈಗೊಳ್ಳುವುದು ಖಚಿತ ಎಂದು ಕಮಲ್ ಪಂಥ್ ಎಚ್ಚರಿಕೆ ನೀಡಿದ್ದಾರೆ.

Edited By : Vijay Kumar
Kshetra Samachara

Kshetra Samachara

18/02/2022 08:11 pm

Cinque Terre

780

Cinque Terre

0

ಸಂಬಂಧಿತ ಸುದ್ದಿ