ಅಂತೂ ಇಂತು ಜನ ಕೊರೊನಾದಿಂದ ತಪ್ಪಿಸಿಕೊಂಡು ನೆಮ್ಮದಿಯಿಂದ ಬದುಕೋಕೆ ಶುರು ಮಾಡಿದ್ದಾರೆ. ಆದರೆ, ಈಗ ಮತ್ತೊಂದು ವೈರಸ್ ಎಂಟ್ರಿ ಆಗಿದ್ದು ಜನರಲ್ಲಿ ಭಯ ಹುಟ್ಟಿಸಿದೆ. ಹೀಗಾಗಿ ಆರೋಗ್ಯ ಇಲಾಖೆ ಫುಲ್ ಆಕ್ಟಿವ್ ಆಗಿದ್ದು, ಕೊರೊನಾದಂತೆ ಟಫ್ ರೂಲ್ಸ್ ತರಲು ಮುಂದಾಗಿದೆ.
ಪಶ್ಚಿಮ ಆಫ್ರಿಕಾ, ಯುರೋಪ್ ರಾಷ್ಟ್ರಗಳಲ್ಲಿ ಅಟ್ಟಹಾಸ ತೋರಿದ್ದ ಮಂಕಿ ಪಾಕ್ಸ್ ಭಾರತದಲ್ಲಿಯೂ ಕಾಣಿಸಿಕೊಂಡಿದೆ. ವಿದೇಶದಿಂದ ಕೇರಳಕ್ಕೆ ವಾಪಸ್ಸಾದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್ ಕಾಣಿಸಿದ್ದು ದೇಶಾದ್ಯಂತ ಆತಂಕ ಹೆಚ್ಚಿದೆ.
ಪಕ್ಕದ ರಾಜ್ಯದಲ್ಲಿ ಶಂಕೆ ವ್ಯಕ್ತವಾಗ್ತಿದ್ದಂತೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಕೋವಿಡ್ ನಷ್ಟು ವೇಗದಲ್ಲಿ ಮಂಕಿ ಪಾಕ್ಸ್ ವೈರಸ್ ಹರಡಲ್ಲ. ಆದರೆ, ನಿರ್ಲಕ್ಷ್ಯ ಮಾಡಬೇಡಿ ಎಂದು ಇಲಾಖೆ ಜನರಲ್ಲಿ ಮನವಿ ಮಾಡಿದೆ. ಅಲ್ಲದೆ, ತಾಂತ್ರಿಕ ಸಲಹಾ ಸಮಿತಿ ಕಾನ್ಫಿಡೆನ್ಶಿಯಲ್ ಸಭೆ ನಡೆಸಿದೆ. ಕೋವಿಡ್ ಮಾದರಿಯಲ್ಲೇ ಮಂಕಿ ಪಾಕ್ಸ್ ನಿರ್ವಹಣೆಗೆ ಸಜ್ಜಾಗಿದೆ.
ಹಾಗಾದ್ರೆ TACನಲ್ಲಿ ತೆಗೆದುಕೊಂಡ ನಿರ್ಣಯ ಏನು ?
* ಮಂಕಿಪಾಕ್ಸ್‌ಗೆ ಪ್ರತ್ಯೇಕ ಗೈಡ್‌ಲೈನ್ಸ್ ಪಾಲಿಸಬೇಕು
* ಜ್ವರ ಹಾಗೂ ರಾಷಸ್ ಇದ್ದವರ ಜೊತೆ ಸಂಪರ್ಕ ಬೆಳೆಸದಂತೆ ನೋಡಿಕೊಳ್ಳಬೇಕು
* ಯೂರೋಪ್, ಆಫ್ರಿಕಾ ಸೇರಿ 50 ಮಂಕಿಪಾಕ್ಸ್ ಪ್ರಕರಣ ಕಂಡು ಬಂದ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಬೇಕು
* ಬೆಂಗಳೂರು ಹಾಗೂ ಮಂಗಳೂರು ಏರ್‌ಪೋರ್ಟ್‌ಗಳಲ್ಲಿ ಪ್ರಯಾಣಿಕರಿಗೆ ಸಿಂಪ್ಟಮ್ಸ್ ಚೆಕ್ ಮಾಡಿಸಬೇಕು ( ಜ್ವರ, ಬೆವರುವಿಕೆ, ಸ್ವೆಲ್ಲಿಂಗ್, ತಲೆನೋವು, ಕೀಲುನೋವು, ಕಫ, ಗಂಟಲುನೋವು, ಸ್ಕಿನ್ ರಾಷಸ್)
* ಸಿಂಪ್ಟಮ್ಸ್ ಕಂಡುಬಂದವರನ್ನು ಕೂಡಲೇ PHC ಸೆಂಟರ್‌ಗೆ ಶಿಫ್ಟ್ ಮಾಡಬೇಕು
* ಸಿಂಪ್ಟಮ್ಸ್ ಇರುವವರ ಬಳಿ N95 ಮಾಸ್ಕ್ ಧರಿಸಬೇಕು, ಪಿಪಿಇ ಕಿಟ್ ಬಳಕೆ ಮಾಡಬೇಕು, ಮಾಸ್ಕ್ ಶೀಲ್ಡ್ ಧರಿಸಬೇಕು
* ಸಿಂಪ್ಟಮ್ಸ್ ಕಂಡು ಬಂದವರನ್ನು ತಕ್ಷಣ ಐಸೋಲೇಷನ್ ಮಾಡಬೇಕು
* ಶಂಕಿತರ ಸ್ಯಾಂಪಲ್ಸ್‌ನ್ನು ಪರೀಕ್ಷೆಗೆ ಒಳಪಡಿಸಬೇಕು
* ಶಂಕಿತರ ಕಾಂಟ್ರಾಕ್ಟ್ ಟ್ರೇಸ್ ಮಾಡಿ ಪರೀಕ್ಷೆಗೆ ಒಳಪಡಿಸಬೇಕು
* ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುವುದು
* ಹೊರ ರಾಜ್ಯದ ಪ್ರಯಾಣಿಕರ ಮೇಲೆ ಗಮನ ಹರಿಸಲು ಡಿಹೆಚ್ಒಗಳಿಗೆ ಸೂಚನೆ
ಮಂಕಿ ಪಾಕ್ಸ್ ವಿರುದ್ಧ ಕಟ್ಟೆಚ್ಚರ ವಹಿಸಲು ಮತ್ತಷ್ಟು ಕ್ರಮ ಅವಶ್ಯಕತೆ ಇದೆ. ಯುವಕರಲ್ಲಿ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ. ಸರ್ಕಾರದ ಗೈಡ್ ಲೈನ್ಸ್ ನಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗುತ್ತೆ ಅಂತ ಕಮಿಷನರ್ ತಿಳಿಸಿದ್ದಾರೆ .
ಇತ್ತ ನಗರದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಮಂಕಿ ಪಾಕ್ಸ್ ಗೆ ಸಪರೇಟ್ ವಾರ್ಡ್ ನಿರ್ಮಿಸಲಾಗಿದೆ. ಈ ಹಿಂದಿನ ಕೊರೊನಾ ವಾರ್ಡ್ ಗಳಲ್ಲಿ ಕೆಲವು ರೂಂ ಗಳನ್ನು ಮಂಕಿ ಪಾಕ್ಸ್ ಬೆಡ್ ಗಳಾಗಿ ಕನ್ವರ್ಟ್ ಮಾಡಲಾಗಿದೆ. ಸದ್ಯ ಮಂಕಿ ಪಾಕ್ಸ್ ಗೆ 2 ಬೆಡ್ ಮೀಸಲಿದ್ದು, ಸೋಂಕು ಕಂಡು ಬಂದ್ರೆ ಬೆಡ್ ಸಂಖ್ಯೆ ಜಾಸ್ತಿ ಮಾಡಲಾಗುತ್ತೆ ಅಂತ ಕೆ.ಸಿ. ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ತಿಳಿಸಿದರು.
- ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
25/07/2022 08:51 pm