ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣ ತಿಂಗಳಲ್ಲೇ ಡಬಲ್; ನಿರ್ಲಕ್ಷ್ಯ ವಹಿಸಿದ್ರೆ ಮತ್ತಷ್ಟು ಡೇಂಜರ್…

ಸತತ ಮಳೆಯ ನಡುವೆಯೇ ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿಯ ಆರ್ಭಟ ಶುರುವಾಗಿದೆ. ಈ ತಿಂಗಳು ಬಿಬಿಎಂಪಿ ವ್ಯಾಪ್ತಿಯಲ್ಲಿನ 503 ಪ್ರಕರಣಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿ 530 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ರಾಜ್ಯ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಮೂಲಗಳ ಪ್ರಕಾರ, ಜುಲೈನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ವರ್ಷದ 341 ಪ್ರಕರಣಗಳಿಗೆ ಹೋಲಿಸಿದರೆ ಹಾಲಿ ವರ್ಷದ ಸಂಖ್ಯೆ ಹೆಚ್ಚಾಗಿದೆ. ಆದರೆ, ಯಾವುದೇ ಸಾವು ಸಂಭವಿಸಿಲ್ಲ. ಇನ್ನು ಕಣ್ಗಾವಲು ಮತ್ತು ಲಾರ್ವಾ ನಿಯಂತ್ರಣ ಕ್ರಮಗಳನ್ನು ಸರ್ಕಾರ ತೀವ್ರಗೊಳಿಸಿದೆ. ಮನೆ ಮನೆ ಸಮೀಕ್ಷೆ, ನೀರು ನಿಲ್ಲದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಹೆಚ್ಚಿನವರಿಗೆ ಜ್ವರ, ತಲೆನೋವು, ಸುಸ್ತು, ಕಣ್ಣಿನ ನೋವು, ಹಸಿವಿನ ಕೊರತೆಯಂತಹ ರೋಗಲಕ್ಷಣಗಳಿವೆ. ಆದ್ರೆ ಹೊಟ್ಟೆ ನೋವು, ವಾಂತಿ, ತುರಿಕೆ ಅಲ್ಲದ ದದ್ದುಗಳು ಮತ್ತು ಪ್ಲೇಟ್ಲೆಟ್ ಎಣಿಕೆ ಕಡಿಮೆಯಾಗುವುದು ಸೇರಿದಂತೆ ಎಚ್ಚರಿಕೆಯ ಚಿಹ್ನೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಡಾ. ತ್ರಿಲೋಕ್ ಚಂದ್ರ ಹೇಳಿದ್ರು.. ಇನ್ನು 20 ರಿಂದ 50 ವರ್ಷ ವಯಸ್ಸಿನವರು ಕ್ರಮವಾಗಿ ಶಾಲೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಸೊಳ್ಳೆ ಕಡಿತಕ್ಕೆ ಒಳಗಾಗುವ ಪ್ರಕರಣಗಳು ಹೆಚ್ಚಿವೆ ಎಂದು ತಿಳಿದುಬಂದಿದೆ..

ಗಣೇಶ್ ಹೆಗಡೆ, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು

Edited By :
PublicNext

PublicNext

19/07/2022 07:47 pm

Cinque Terre

31.86 K

Cinque Terre

0

ಸಂಬಂಧಿತ ಸುದ್ದಿ