ಬೆಂಗಳೂರು: ತಾಯಿ ಚಾಮುಂಡೇಶ್ವರಿ ನಾಡಿನ ಜನತೆಗೆ ಒಳ್ಳೆಯದನ್ನು ಮಾಡಿ ಸುಖ ಶಾಂತಿ ನೆಲೆಸುವಂತೆ ಮಾಡಲಿ ಎಂದು ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.
ಬೆಂಗಳೂರು ನಗರದ ಆರ್.ಟಿ. ನಗರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ, ನಾಡಿನಲ್ಲಿ ಎರಡು ದಿನಗಳ ಕಾಲ ಹಬ್ಬದ ವಾತಾವರಣ ಇರುತ್ತದೆ. ಈ ಹಿನ್ನೆಲೆಯಲ್ಲಿ ನಾಡಿನ ಜನರು ಎಲ್ಲರೂ ಕೂಡ ಉತ್ತಮವಾಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ. ತಾಯಿ ಚಾಮುಂಡೇಶ್ವರಿ ಎಲ್ಲಾ ನಾಡಿನ ಜನತೆಗೆ ಒಳ್ಳೆಯದನ್ನ ಮಾಡಲಿ. ದುಷ್ಟ ಶಕ್ತಿ ನಿಗ್ರಹವಾಗಿ ಶಿಷ್ಟ ಶಕ್ತಿ ಪರಿಪಾಲನೆಯಾಗಲಿ ಎಂಬ ಮಾತಿನಂತೆ, ನಾಡಿನಲ್ಲಿ ಸುಭಿಕ್ಷೆ ಶಾಂತಿ ಅಭಿವೃದ್ಧಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಕೇಳಿದ್ದೇನೆ ಮತ್ತೊಮ್ಮೆ ಪೂಜೆ ಸಲ್ಲಿಸಿ ಕೇಳುತ್ತೇನೆ ಎಂದರು.
ಈ ವೇಳೆ ಮಹಾರಾಷ್ಟ್ರ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿರುವ ಕೆಲ ಸಮಸ್ಯೆಗಳಿಗೆಲ್ಲಾ ಎರಡು ದಿನಗಳ ಸಂಭ್ರಮದ ಆಚರಣೆಯ ನಂತರ 6ನೇ ತಾರೀಕಿನಂದು ಸ್ಪಷ್ಟ ಉತ್ತರ ದೊರೆಯಲಿದೆ ಎಂದು ಹೇಳಿದರು.
PublicNext
04/10/2022 12:23 pm