ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನ

ಬೆಂಗಳೂರು: ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ಧತಿ ನಿಯಂತ್ರಣದ ಆದೇಶದನ್ವಯ ಕನಿಷ್ಠ ಪಡಿತರ ಚೀಟಿಗಳಿಗಿಂತ ಹೆಚ್ಚಿನ ಪಡಿತರ ಚೀಟಿ ಹೊಂದಿರುವ ನ್ಯಾಯಬೆಲೆ ಅಂಗಡಿ ಇರುವ ಪ್ರದೇಶಗಳಲ್ಲಿ ನಿಯಮಾನುಸಾರ ಹೊಸ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಹ ಸಹಕಾರ ಸಂಘ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹೊಸ ನ್ಯಾಯಬಲೆ ಅಂಗಡಿ ತೆರೆಯಲು ಪ್ರಸ್ತಾಪಿಸಿರುವ ಪ್ರದೇಶಗಳು ವಾರ್ಡ್ -55 ದೇವಸಂದ್ರ ಪ್ರದೇಶದ ಕೃಷ್ಣ ಥೇಟರ್ ರಸ್ತೆ. ಈ ವಾರ್ಡ್ ಗೆ ಪ್ರಸ್ತಾಪಿಸಿರುವ ಹೊಸ ನ್ಯಾಯಬೆಲೆ ಅಂಗಡಿಗಳಿಗೆ ತಲಾ 731 ಪಡಿತರ ಚೀಟಿಗಳನ್ನು ನಿಯೋಜಿಸಲಾಗಿದೆ.

ಹೊಸ ನ್ಯಾಯಬಲೆ ಅಂಗಡಿ ಪ್ರಾಧಿಕರಣ ಪಡೆಯಲು ತಾಲ್ಲೂಕು ಕೃಷಿ ಪ್ರಾಥಮಿಕ ಪತ್ತಿನ ಮಾರಾಟ ಸಹಕಾರ ಸಂಘ, ಪ್ರಾಥಮಿಕ ಕೃಷಿ ಸಹಕಾರ ಸಂಘ ಅಥವಾ ವ್ಯವಸಾಯೋತ್ಪನ್ನ ಸಹಕಾರ ಸಂಘ, ತೋಟಗಾರಿಕಾ ಉತ್ಪನ್ನಗಳ ಬಳಕೆದಾರರ ಸಹಕಾರ ಸಂಘ, ನೊಂದಾಯಿತ ಸಹಕಾರ ಸಂಘ, ನೊಂದಾಯಿತ ಪ್ರಾಥಮಿಕ ಬಳಕೆದಾರರು ಸಹಕಾರ ಸಂಘಗಳು, ಬೃಹತ್ ಪ್ರಮಾಣದ ಆದಿವಾಸಿ ವಿವಿದೋದ್ದೇಶ ಸಹಕಾರ ಸಂಘಗಳು, ನೊಂದಾಯಿತ ನೇಕಾರರು ಸಹಕಾರ ಸಂಘಗಳು, ನೊಂದಾಯಿತ ಮಹಿಳಾ ವಿವಿದೋದ್ದೇಶ ಸಹಕಾರ ಸಂಘ, ನೊಂದಾಯಿತ ವಿವಿದೋದ್ದೇಶ ಸಹಕಾರ ಸಂಘ, ದೈಹಿಕ ಅಂಗವಿಕಲ ಕಲ್ಯಾಣ ಸಹಕಾರ ಸಂಘ, ಬ್ಯಾಂಕುಗಳನ್ನು ನಡೆಸುತ್ತಿರುವ ಸಹಕಾರ ಸಂಘಗಳು ಅಥವಾ ಸಹಕಾರ ಬ್ಯಾಂಕುಗಳು, ಸ್ತೀ ಶಕ್ತಿ ಸಂಘಗಳು/ಮಹಿಳಾ ಸ್ವ ಸಹಾಯ ಸಂಘಗಳಿಗೆ ಆದ್ಯತೆ ಮೇರೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ವಿಕಲಚೇತನರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗು (ಇತರರು) ಅವಕಾಶವನ್ನು ಕಲ್ಪಿಸಲಾಗಿದೆ.

ಅರ್ಹ ಸಂಸ್ಥೆಗಳು ನಿಗಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಉಪನಿರ್ದೇಶಕರು, ಅಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಸಹಾರಗಳ ಇಲಾಖೆ, ಪೂರ್ವ ವಲಯ, ಬೆಂಗಳೂರು ಇಲ್ಲಿ ಅಕ್ಟೋಬರ್ 27 ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/10/2022 11:17 pm

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ