ಬೆಂಗಳೂರು: ಬಿಬಿಎಂಪಿಯಲ್ಲಿ ಖಾಲಿ ಇರುವ 3,673 ಪೌರಕಾರ್ಮಿಕ ಹುದ್ದೆ ಭರ್ತಿಗೆ ರಾಜ್ಯ ಸರ್ಕಾರ ನೇಮಕಾತಿ ಕರಡು ನಿಯಮದ ಅಧಿಸೂಚನೆ ಪ್ರಕಟಿಸಿದ್ದು, ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ 7 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಸೂಚಿಸಲಾಗಿದೆ.
ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಪೌರಕಾರ್ಮಿಕರ ನೇಮಕಾತಿಗೆ ಸರ್ಕಾರ ಚಾಲನೆ ನೀಡಿದೆ. ಅದಕ್ಕೆ ಸಂಬಂಸಿದಂತೆ ನಿಯಮಗಳನ್ನೊಳಗೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಪೌರಕಾರ್ಮಿಕರ ನೇಮಕಾತಿ) (ವಿಶೇಷ) ನಿಯಮಗಳು 2022 ಕರಡು ನಿಯಮಗಳನ್ನು ಪ್ರಕಟಿಸಿದೆ.
ಪೌರಕಾರ್ಮಿಕರ ಆಯ್ಕೆಗೆ ಸಂಬಂಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ 10 ಜನರ ಸಮಿತಿ ನೇಮಕ ಸೇರಿ ಇನ್ನಿತರ ವಿಷಯಗಳನ್ನೊಳಗೊಂಡ ಕರಡು ನಿಯಮಾವಳಿಗೆ ಸಂಬಂಸಿದ ಆಕ್ಷೇಪಗಳನ್ನು ಅ. 2ರೊಳಗೆ ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸಸೌಧ, ಅಂಬೇಡ್ಕರ್ ವೀದಿ, ಬೆಂಗಳೂರು 560001 ಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
Kshetra Samachara
26/09/2022 11:04 pm