ವರದಿ- ಗಣೇಶ್ ಹೆಗಡೆ
ಬೆಂಗಳೂರು- ಬಿಬಿಎಂಪಿಯಲ್ಲಿ ಒಂದು ಹುದ್ದೆಗೆ ಇಬ್ಬರನ್ನು ನೇಮಿಸಲಾಗಿದೆ. ಪಾಲಿಕೆಯ ಹಣಕಾಸು ವಿಭಾಗಕ್ಕೆ ಇಬ್ಬರು ಅಪರ ಆಯುಕ್ತರ ನೇಮಕ ಮಾಡಲಾಗಿದೆ. ಇಬ್ಬರಿಗೂ ಪ್ರತ್ಯೇಕ ಚೇಂಬರ್, ಸಂಬಳ, ಸಹಾಯಕ ಕಚೇರಿ ನೀಡಲಾಗಿದೆ.
ಒಂದು ಹುದ್ದೆಗೆ ಇಬ್ಬರು ಅಧಿಕಾರಿಗಳ ಹಗ್ಗ- ಜಗ್ಗಾಟ ನಡೆಯುತ್ತಿದೆ. ಹಣಕಾಸು ವಿಭಾಗದ ಅಪರ ಆಯುಕ್ತ ಎಸ್. ವೆಂಕಟೇಶ್ ಹಾಗೂ ಅದೇ ಹುದ್ದೆಯನ್ನು ನಾಗರಾಜ್ ಶೇರೇಗಾರ್ ನಿರ್ವಹಿಸುತ್ತಿದ್ದಾರೆ.
ಇದರಿಂದ ಬಿಬಿಎಂಪಿಗೆ ಪ್ರತಿ ತಿಂಗಳು ಲಕ್ಷ ಲಕ್ಷ ಹೊರೆಯಾಗುತ್ತಿದೆ. ಅಪರ ಆಯುಕ್ತರ ಸಂಬಳ ತಿಂಗಳಿಗೆ 1,23 ,000 ರೂ . ಹಾಗೂ ಸಹಾಕರ ಕಚೇರಿ ನಿರ್ವಹಣಾ ವೆಚ್ಚ ಬೇರೆ. ಇದರಿಂದ ಪಾಲಿಕೆಗೆ ವರ್ಷಕ್ಕೆ 15 ಲಕ್ಷ ಆರ್ಥಿಕ ಹೊರೆಯಾಗಿದೆ. ಇನ್ನೂ ಎರಡು ಹುದ್ದೆಗಳ ಸೃಷ್ಟಿಯ ಹಿಂದೆ ಲಕ್ಷ ಲಕ್ಷ ಹಣ ವಸೂಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಬಿಲ್ ಪಾವತಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಹಣ ಪೀಕಲು ಎರಡು ಹುದ್ದೆಯ ಸೃಷ್ಟಿ ಮಾಡಲಾಗಿದೆ ಎಂದು ಎನ್ನಲಾಗಿದೆ.
ವಿಪರ್ಯಾಸವೆಂದರೆ ಸಿ & ಆರ್ ರೂಲ್ ಪ್ರಕಾರ ಎರಡು ಹುದ್ದೆಗಳ ಸೃಷ್ಟಿ ಮಾಡುವಂತಿಲ್ಲ. ಇದರ ನಿಯಮಗಳ್ನು ಸ್ಪಷ್ಟವಾಗಿ ಉಲ್ಲಂಘನೆ ಆಗಿದೆ ಎಂದು ಹೇಳಲಾಗುತ್ತಿದೆ.
Kshetra Samachara
04/05/2022 05:55 pm